ಡೆಹ್ರಾಡೂನ್: ಭಾರತದ ಪ್ರಪ್ರಥಮ ಮಹಿಳಾ ಡಿಜಿಪಿ ಕಾಂಚನ್ ಚೌಧರಿ ಭಟ್ಟಾಚಾರ್ಯ ಇಂದು ಮುಂಬೈಯಲ್ಲಿ ನಿಧನರಾದರು. ಕೆಲ ಕಾಲದಿಂದ ಅವರು ಅಸೌಖ್ಯದಿಂದ ಬಳಲುತ್ತಿದ್ದರು.
1973ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಭಟ್ಟಾಚಾರ್ಯ 2004ರಲ್ಲಿ ಉತ್ತರಾಖಂಡದ ಡಿಜಿಪಿಯಾಗಿ ನೇಮಕಗೊಂಡು ಇತಿಹಾಸ ನಿರ್ಮಿಸಿದ್ದರು. 2007ರಲ್ಲಿ ಅವರು ನಿವೃತ್ತರಾದರು.
ನಿವೃತ್ತಿಯ ನಂತರ ಅವರು 2014ರ ಲೋಕಸಭಾ ಚುನಾವಣೆ ಸಂದರ್ಭ ರಾಜಕೀಯ ಪ್ರವೇಶಿಸಿ ಆಮ್ ಆದ್ಮಿ ಪಕ್ಷದ ಟಿಕೆಟ್‍ನಲ್ಲಿ ಸ್ಪರ್ಧಿಸಿದರು. ಆದರೆ ಚುನಾವಣೆಯಲ್ಲಿ ಗೆಲುವು ಸಾಧಿಸಲಿಲ್ಲ.