ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರದ ಅಜಿತ ಭವನದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯು ನಡೆಯಿತು.
“ಕರಾಟೆ ಕೇವಲ ಪ್ರದರ್ಶನಕ್ಕಾಗಿ ಅಲ್ಲ, ಬದಲಾಗಿ ಅದೊಂದು ಆತ್ಮ ರಕ್ಷಣೆಯ ಕಲೆಯೂ ಆಗಿದೆ. ಕರಾಟೆ ತನ್ನ ಎದುರಾಳಿಯನ್ನು ಹೇಗೆ ಎದುರಿಸಬೇಕೆನ್ನುವುದನ್ನು ಕಲಿಸಿ ಕೊಡುತ್ತದೆ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕ್ಕೆ ಸೀಮಿತವಾಗದೆ, ಆಟೋಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಜ್ಞಾನೇಶ್ರವರು ತಿಳಿಸಿದರು.
14 ಮತ್ತು 17ರ ವಯೋಮಿತಿಯ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾರ್ಥಿಗಳ ಕರಾಟೆ ಸ್ಪರ್ಧೆಯಲ್ಲಿ ವಿವಿಧ ಶಾಲೆಯಿಂದ ಒಟ್ಟು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ. ಪ್ರಥಮ ಸ್ಥಾನ ಪಡೆದ ಮಕ್ಕಳನ್ನು ಫಲಕ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು, ಹಾಗೂ ಪ್ರಥಮ ಸ್ಥಾನ ಪಡೆದ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಲಕರಾದ ವಸಂತಮಾಧವ, ಸಹ ಸಂಚಲಕರಾದ ರಮೇಶ್ ಎನ್, ರಾಷ್ರೀಯ ಕರಾಟೆ ತೀರ್ಪುಗಾರರಾದ ಧರ್ನಪ್ಪ, ರಾಷ್ರೀಯ ಕರಾಟೆ ತೀರ್ಪುಗಾರರಾದ ದಿನೇಶ್, ಶ್ರೀರಾಮ ಪ್ರಾಥಮಿಕ ಶಾಲಾ ಸಮಿತಿ ಅದ್ಯಕ್ಷಕರಾದ ಚಂದ್ರಶೇಖರ್ ಸಾಲ್ಯಾನ್, ಕಾರ್ಯದರ್ಶಿಯಾಗಿರುವ ಜಯರಾಮ ರೈ, ಬಾಳ್ತಿಲ ವಲಯದ ಸಂಪನ್ಮೂಲ ವ್ಯಕ್ತಿಯಾಗಿರುವ ಆರತಿ, ಶಾಲಾ ಮುಖ್ಯೋಪಾಧ್ಯಾಯರದ ರವಿರಾಜ್ ಕಣಂತೂರು ವೇದಿಕೆಯಲ್ಲಿದ್ದರು.
ಅತಿಥಿಗಳು ದೀಪ ಪ್ರಜ್ವಲನೆ ಮಾಡಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀರಾಮ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ರಕ್ಷಿತಾ ನಿರೂಪಿಸಿ, ರಾಧಿಕ ಸ್ವಾಗತಿಸಿ ದಿವ್ಯ ವಂದಿಸಿದರು.