ದುಬೈ: ಅಂಧರ ವಿಶ್ವಕಪ್ ಫೈನಲ್ ಮುಖಾಮುಖಿಯಲ್ಲಿ ಸಾಂಪ್ರದಾಯಿಕ ವೈರಿ ಪಾಕಿಸ್ತಾನ ತಂಡವನ್ನು ಮಣಿಸಿರುವ ಭಾರತ, ಪ್ರಶಸ್ತಿ ಎತ್ತಿ ಹಿಡಿದಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಗೆಲುವಿಗಾಗಿ 309 ರನ್ ಗುರಿ ಬೆನ್ನತ್ತಿದ ಭಾರತ 2 ವಿಕೆಟುಗಳ ಅಂತರದಲ್ಲಿ ಗುರಿ ತಲುಪಿತು.
ಹಾಲಿ ಚಾಂಪಿಯನ್ ಭಾರತ ತಂಡ 5ನೇ ಅಂಧರ ಏಕದಿನ ವಿಶ್ವಕಪ್ ಕ್ರಿಕೆಟ್ ಕೂಟದ ಫೈನಲ್ ಪ್ರವೇಶಿಸಿತ್ತು. ಇಂದು ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ 40 ಓವರ್‌ಗಳಲ್ಲಿ 8ವಿಕೆಟ್ ಕಳೆದುಕೊಂಡು 308ರನ್ ಗಳಿಸಿತ್ತು.
ಈ ಗುರಿಯನ್ನು ಬೆನ್ನತ್ತಿದ್ದ ಭಾರತ ತಂಡ ಸುಲಭದ ಗೆಲುವು ದಾಖಲಿಸಿದ್ದು, ಮತ್ತೊಮ್ಮೆ ಪ್ರಶಸ್ತಿಗೆ ಮುತ್ತಿಕ್ಕಿದೆ. 2006ರಲ್ಲಿ ನಡೆದ ಫೈನಲ್ ಮುಖಾಮುಖಿಯಲ್ಲಿ ಪಾಕಿಸ್ತಾನ ಗೆಲುವು ದಾಖಲಿಸಿದ್ದರೆ, 2014ರಲ್ಲಿ ಭಾರತ ವಿಜಯಶಾಲಿಯಾಗಿತ್ತು.
ವರದಿ : ಕಹಳೆ ನ್ಯೂಸ್