ಮಂಗಳೂರು: ನಗರದ ಕಾರ್ ಸ್ಟ್ರೀಟ್ ಬಿಇಎಂ ಶಾಲೆಯ ಜಂಕ್ಷನ್ ಬಳಿ ಕಾರು ಮತ್ತು ಬೈಕ್‍ನಲ್ಲಿ ಬಂದು ಪರಿಸರದ ಚಿನ್ನಾಭರಣದ ಅಂಗಡಿಗಳಿಗೆ ಚಿನ್ನವನ್ನು ಖರೀದಿಸಲು ಬರುವ ಗ್ರಾಹಕರನ್ನು ಮತ್ತು ವ್ಯಾಪಾರ ಮುಗಿಸಿ ಹೋಗುವ ಅಂಗಡಿಗಳ ಮಾಲಕರನ್ನು ವಾಹನಗಳಲ್ಲಿ ಅಡ್ಡಗಟ್ಟಿ ಹೆದರಿಸುತ್ತಿದ್ದು, ಅವರಲ್ಲಿದ್ದ ಹಣವನ್ನು ಮತ್ತು ಚಿನ್ನವನ್ನು ಸುಲಿಗೆ ಮಾಡಿ ವಿಲಾಸಿ ಜೀವನ ನಡೆಸಲು ಹೊಂಚು ಹಾಕುತ್ತಿದ್ದ 6 ಜನ ಆರೋಪಿತರುಗಳನ್ನು ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಓರ್ವ ಆರೋಪಿತನನ್ನು ಖಚಿತ ಮಾಹಿತಿ ಮೇರೆಗೆ ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರು ಹಾಗೂ ಮಂಗಳೂರು ಉತ್ತರ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಯವರು ಬಂಧಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ್ ಕಾರ್-1, ಮಾರುತಿ ರಿಡ್ಜ್ ಕಾರ್-1, ಮಾರುತಿ ಸೆಲೆರಿಯೋ ಕಾರ್-1, ಟೋಯೋಟಾ ಗ್ಲಾಂಜಾ ಕಾರ್-1 ಬಜಾಜ್ ಕಂಪನಿಯ ಬೈಕ್-1 ನ್ನು ಮತ್ತು ನಗದು ಹಣ 5,12,000/- ಮತ್ತು ಸುಮಾರು 140 ಗ್ರಾಂ ಚಿನ್ನ ಇತ್ಯಾದಿ ಸುಮಾರು 25 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ಅಬ್ದುಲ್ ಮಜೀದ್ ಹೆಚ್, ಸೈಯದ್, ಮೊಹಮ್ಮದ್ ಶಾಪಿ, ಆಸೀಫ್ ಕೆ, ಮೊಹಮ್ಮದ್ ನಾಸೀರ್, ಅಹಮ್ಮದ್ ಬಶೀರ್, ಮನ್ಸೂರ್ ಅಲಿ ಎಂದು ಆರೋಪಿಗಳನ್ನು ಗುರುತಿಸಲಾಗಿದೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಾನ್ಯ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ಪಿ ಎ ಹರ್ಷ ಐಪಿಎಸ್, ಶ್ರೀ ಅರುಣಾಂಕ್ಷು ಗಿರಿ, ಮಾನ್ಯ ಉಪ ಪೊಲೀಸ್ ಆಯುಕ್ತರು, ಲಕ್ಷ್ಮಿ ಗಣೇಶ್ ಉಪ ಪೊಲೀಸ್ ಆಯುಕ್ತರು(ಅಪರಾಧ & ಸಂಚಾರ), ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪ ವಿಭಾಗ, ಭಾಸ್ಕರ ಒಕ್ಕಲಿಗ, ಮಂಗಳೂರು ನಗರ ಉತ್ತರ ಪೊಲೀಸ್ ಠಾಣಾ ನಿರೀಕ್ಷಕರಾದ ಗೋವಿಂದರಾಜು ಬಿ, ಪಿಎಸ್‍ಐ ಕ್ರೈಂ ಸುಂದರ ಮತ್ತು ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ ಆರ್ ಮತ್ತು ಸಿಬ್ಬಂದಿಯವರಾದ ಗಂಗಾಧರ್ ಎನ್,ವೆಲೆಸ್ಟೀನ್ ಜಾರ್ಜ್ ಡಿಸೋಜಾ, ವಿಶ್ವನಾಥ, ಸಂತೋಷ ಸಸಿಹಿತ್ಲು, ಕಿಶೋರ್ ಕೋಟ್ಯಾನ್, ನಾಗರಾಜ ಚಂದರಗಿ, ಭೀಮಪ್ಪ ಉಪ್ಪಾರ, ರಮೇಶ ಲಮಾಣಿ, ಅಂಜನಪ್ಪ ಹಾಗೂ ಮಂಗಳೂರು ಉತ್ತರ ಠಾಣಾ ಎಎಸ್‍ಐ ಪದ್ಮನಾಭ ಮತ್ತು ಜಗದೀಶ್ ಹಾಗೂ ಸಿಬ್ಬಂದಿಯವರಾದ ಸುಜನ್ ಶೆಟ್ಟಿ, ಚಿದಾನಂದ, ತಿಪ್ಪರೆಡ್ಡಿ, ಬಸವರಾಜ, ಮಹಾದೇವ ಹಾಗೂ ಮಂಗಳೂರು ನಗರ ಪೊಲೀಸ್ ಕಂಪ್ಯೂಟರ್ ಘಟಕದ ಮನೋಜ್ ಕುಮಾರ್ ರವರು ಭಾಗವಹಿಸಿರುತ್ತಾರೆ.