Sunday, November 24, 2024
ಸುದ್ದಿ

ಬಂಟ್ವಾಳದಲ್ಲಿ ಆರೋಪಿಗಳ ಬಂಧನ – ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿಮೂಡ ಗ್ರಾಮದ ಮೊಡಂಕಾಪು ಕಾರ್ಮೆಲ್ ಕಾಲೇಜು ಬಳಿಯಲ್ಲಿ ರುವ ಜನಾರ್ದನ ಹೊಳ್ಳ ಅವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪ್ರವೀಣ್ ಹೊಸನಗರ ಹಾಗೂ ಸಂಜು ವಿರಾಜಪೇಟೆ ಅವರಿಗೆ ಮಂಗಳೂರು ನ್ಯಾಯಲಯವು ಶಿಕ್ಷೆ ವಿಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾತ್ರಿಹೊತ್ತಲ್ಲಿ ಮನೆಗೆ ನುಗ್ಗಿ ಮನೆಯ ಯಜಮಾನನಿಗೆ ತಲವಾರಿನಿಂದ ಹೊಡೆದು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಮಂಗಳೂರು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ 7 ವರ್ಷ ಜೈಲು ಹಾಗೂ 10 ಸಾವಿರ ದಂಡದ ಶಿಕ್ಷೆ ವಿಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ಆಗಸ್ಟ್ 8ರಂದು ರಾತ್ರಿ 9.30 ಗಂಟೆಯ ವೇಳೆ ಜನಾರ್ದನ ಹೊಳ್ಳ ಅವರು ಮನೆಯಲ್ಲಿ ಟಿ.ವಿ ನೋಡುತ್ತಿರುವ ಸಂದರ್ಭದಲ್ಲಿ ಮನೆಯ ಬೆಲ್ ಹೊಡೆದ ಶಬ್ದವಾಯಿತು.

ಜನಾರ್ದನ ಅವರು ಯಾರು ಅಂತ ನೋಡಲು ಬಾಗಿಲು ಚಿಲಕ ತೆರೆದಾಗ ಇಬ್ಬರು ಅಪಚಿರಿತ ವ್ಯಕ್ತಿಗಳು ಇವರನ್ನು ಕುತ್ತಿಗೆಗೆ ಕೈಹಾಕಿ ಮನೆಯೊಳಗೆ ದೂಡಿ ಹಾಕಿದರು.

ಬಳಿಕ ಕುತ್ತಿಗೆ ಹಿಡಿದು ಬಾಯಿ ಮುಚ್ಚು , ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕೊಡು ಇಲ್ಲದಿದ್ದರೆ ಕೊಲ್ಲುತ್ತೇವೆ ಎಂದು ಬೆದರಿಸಿ ಕುತ್ತಿಗೆಯಲ್ಲಿದ್ದ 75 ಸಾವಿರ ಮೌಲ್ಯದ ಚಿನ್ನದ ಸರವನ್ನು ಬಲತ್ಕಾರವಾಗಿ ಎಳೆದುಕೊಂಡರು, ಅವೇಳೆ ಹೊಳ್ಳ ಅವರ ಕುತ್ತಿಗೆ ಹಾಗೂ ತಲೆಗೆ ಗಾಯವಾಗಿತ್ತು.

ನೆಲಕ್ಕೆ ಬಿದ್ದ ಹೊಳ್ಳ ಅವರು ಜೋರಾಗಿ ಕಿರುಚಿದಾಗ ಸ್ನಾನ ಗೃಹದಲ್ಲಿದ್ದ ಇವರ ಪತ್ನಿ ಮನೆಯೊಳಗೆ ಬಂದು ನೋಡಿದಾಗ ಕಳವು ಮಾಡಿದ ವಿಷಯ ಬೆಳಕಿಗೆ ಬಂತು. ಅಷ್ಟು ಹೊತ್ತಿಗಾಗಲೇ ಕೊಣೆಯಲ್ಲಿ ಹುಡುಕಾಟ ನಡೆಸುತ್ತಿದ್ದ ಆರೋಪಿಗಳು ಪರಾರಿಯಾಗಿದ್ದರು.

ಈ ಸಂದರ್ಭದಲ್ಲಿ ಕುತ್ತಿಗೆಗೆ ಮತ್ತು ತಲೆಗೆ ಗಾಯಗೊಂಡು ರಕ್ತ ಸುರಿಯುತ್ತಿದ್ದ ಹೊಳ್ಳ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆರೋಪಿಗಳನ್ನು ಬಂಟ್ವಾಳ ವೃತ್ತ ನಿರೀಕ್ಷಕ ನಾಗರಾಜ್ ಟಿ.ಡಿ.ನಾಗರಾಜ್ ಮಾರ್ಗದರ್ಶನದಂತೆ ಬಂಟ್ವಾಳ ನಗರ ರಾಣಾ ಎಸ್.ಐ ಚಂದ್ರಶೇಖರ್ ಮತ್ತು ಅಪರಾಧ ವಿಭಾಗದ ಎಸ್.ಐ. ಆರೋಪಿಗಳನ್ನು ಬಂಧಿಸಿದ್ದರು.