Sunday, November 24, 2024
ಸುದ್ದಿ

ಮೂಡಬಿದ್ರೆಯಲ್ಲಿ ಸುಲಿಗೆಮಾಡಿ ಪರಾರಿಯಾದ ಆರೋಪಿಯ ಬಂಧನ- ಕಹಳೆ ನ್ಯೂಸ್

ಮೂಡಬಿದ್ರೆ: ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಜಿ.ಎನ್.ಎಂ ನಸಿ೯ಂಗ್ ವಿದ್ಯಾಭ್ಯಾಸ ಮಾಡುತ್ತಿರುವ ಪೂರ್ಣಿಮಾ ನಾಯ್ಕ್ ಎಂಬುವವರ ಬ್ಯಾಗ್ ಕಳ್ಳತನ ಮಾಡಿದ್ದ ಆರೋಪಿ ನವೀನ್ ಗೌಡನನ್ನು ಬಂಧಿಸಲಾಗಿದೆ. ಪೂರ್ಣಿಮಾ ತರಗತಿ ಮುಗಿಸಿ ತನ್ನ ಮನೆಗೆ ಬಸ್ಸಿನಲ್ಲಿ ಹೋಗಿ ಪಾಲಡ್ಕ ಮಾವಿನಕಟ್ಟೆಯಲ್ಲಿ ಇಳಿದು ಕಿನ್ನಿಪದವು ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಪ್ಪು ಬಣ್ಣದ ಆಕ್ಟಿವಾ ನಂಬ್ರ KA 19 EZ 9828 ರಲ್ಲಿ ಬಂದು ಪಿರ್ಯಾದುದಾರರ ಹೆಗಲಿನಲ್ಲಿದ್ದ ಬ್ಯಾಗ್‍ನ್ನು ಎಳೆದು ಚೂರಿಯನ್ನು ತೋರಿಸಿ ಸುಲಿಗೆ ಮಾಡಿ ಪರಾರಿಯಾಗಿದ್ದ ಆರೋಪಿ ನವೀನ್ ಗೌಡ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರ ಮಾನ್ಯ ಪೊಲೀಸ್ ಆಯುಕ್ತರು ಡಾ: ಹರ್ಷಾ, ಐ.ಪಿ.ಎಸ್ ರವರ ನಿರ್ದೇಶನದಂತೆ, ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರು (ಕಾ.ಸು) ಶ್ರೀ ಅರುಣಾಂಶು ಗಿರಿ, ಐ.ಪಿ.ಎಸ್ , ಪೊಲೀಸ್ ಉಪ ಆಯುಕ್ತರು (ಅಪರಾಧ ಮತ್ತು ಸಂಚಾರ) ಶ್ರೀ ಲಕ್ಷ್ಮಿ ಗಣೇಶ್ ಇವರುಗಳ ಮಾರ್ಗದರ್ಶನದಂತೆ ಮತ್ತು ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಶ್ರೀನಿವಾಸ ಆರ್ ಗೌಡ , ಐ.ಪಿ.ಎಸ್ ನೇತೃತ್ವದಲ್ಲಿ ಮೂಡಬಿದ್ರೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಬಿ.ಎಸ್ ದಿನೇಶ್ ಕುಮಾರ್, ಶ್ರೀ ಕೃಷ್ಣ ಬಿ, ಪಿ.ಎಸ್.ಐ (ಕ್ರೈಂ) ಮತ್ತು ಠಾಣಾ ಹೆಚ್.ಸಿ ಗಳಾದ ಶ್ರೀ ಮೊಹಮ್ಮದ್ ಹುಸೇನ್ ಮತ್ತು ಪಿ.ಸಿಗಳಾದ ಶ್ರೀ ಸುಜನ್, ಸಂತೋಷ್, ಯಶವಂತ್, ಕೃಷ್ಣಪ್ಪ ರವರು ಪತ್ತೆ ಕಾರ್ಯದಲ್ಲಿ ಶ್ರಮಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು