Recent Posts

Monday, January 20, 2025
ಸುದ್ದಿ

ನಾಪತ್ತೆಯಾಗಿದ್ದ ಪ್ರಭಾಕರ ಆಚಾರ್ಯ ಅವರ ಮೃತದೇಹ ಪತ್ತೆ – ಕಹಳೆ ನ್ಯೂಸ್

ಉಳ್ಳಾಲ: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಬೊಳಿಯಾರ್ ಪ್ರಭಾ ಜ್ಯುವೆಲ್ಲರ್ಸ್ ಹಾಗೂ ಪ್ರಭಾ ಫೈನಾನ್ಸ್ ಮಾಲಕರಾಗಿದ್ದ ಪ್ರಭಾಕರ ಆಚಾರ್ಯ ಅವರ ಮೃತದೇಹ ಸುರತ್ಕಲ್ ಸಮೀಪದ ಮುಕ್ಕ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

57 ವರ್ಷ ಪ್ರಾಯದ ಪ್ರಭಾಕರ ಆಚಾರ್ಯ ಅವರು ಬೋಳಿಯಾರ್ ನಲ್ಲಿ ಪ್ರಭಾ ಜುವೆಲರ್ಸ್ ಹಾಗೂ ಪ್ರಭಾ ಫೈನಾನ್ಸ್ ಗಳನ್ನು ನಡೆಸುತ್ತಿದ್ದರು. ಪ್ರಭಾಕರ್ ಅವರು ಕಳೆದ ಹಲವಾರು ವರ್ಷಗಳಿಂದ ತನ್ನ ಜುವೆಲರಿಯಲ್ಲೇ ಫೈನಾನ್ಸ್ ನಡೆಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ರವಿವಾರ ಮಧ್ಯಾಹ್ನ ಔಷಧ ತರಲೆಂದು ತನ್ನ ಪತ್ನಿಯಲ್ಲಿ ತಿಳಿಸಿ ಮನೆಯಿಂದ ಹೊರಟಿದ್ದ ಪ್ರಭಾಕರ ಆಚಾರ್ಯ ಅವರು ಬಳಿಕ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿತ್ತು.

ಪ್ರಭಾಕರ ಆಚಾರ್ಯ ಅವರು ನಾಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ಅವರ ಪುತ್ರ ಮಂಗಳೂರು ಹೊರವಲಯದ ಕೊಣಾಜೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇವರ ಸ್ಕೂಟರ್ ಅನಾಥ ಸ್ಥಿತಿಯಲ್ಲಿ ಮುಡಿಪು ಬಳಿ ಪತ್ತೆಯಾಗಿತ್ತು.