Recent Posts

Monday, January 20, 2025
ಸುದ್ದಿ

ಪುಂಜಾಲಕಟ್ಟೆಯ ಮುಖ್ಯೋಪಾಧ್ಯಾಯ ಹೃದಯಾಘಾತದಿಂದ ಸಾವು – ಕಹಳೆ ನ್ಯೂಸ್

ಬಂಟ್ವಾಳ: ಪುಂಜಾಲಕಟ್ಟೆಯಲ್ಲಿ ಮುಖ್ಯೋಪಾಧ್ಯಾಯ ರಾಮಾ ಪಿ. ಸಾಲಿಯಾನ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಳಿ ಹಿ. ಪ್ರಾ.ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದ ಇವರು ಇಂದು ಮುಂಜಾನೆ 5.30 ರ ವೇಳೆ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಕಂಬಳ ಪ್ರಿಯರಾಗಿದ್ದರಲ್ಲದೆ ಕಂಬಳ ಕೋಣದ ಮಾಲಕ ಕೂಡ ಹೌದು. ಕಂಬಳ ಕ್ರೀಡೆಯಲ್ಲಿ ಅನೇಕ ಪ್ರಶಸ್ತಿಯನ್ನು ಇವರ ಕೋಣಗಳು ಪಡೆದುಕೊಂಡಿತ್ತು.

ಸ್ವಸ್ತಿ ಶ್ರೀ ರಾಜ್ಯ ಪ್ರಶಸ್ತಿ ಸಹಿತ ಅನೇಕ ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದಾರೆ.
ತಾಂಬೂಲ ನಾಟಕ ಕಲಾ ತಂಡದ ಪ್ರಮುಖರು ಕೂಡಾ ಆಗಿದ್ದರು. ಸಾಮಾಜಿಕ ಧಾರ್ಮಿಕ ಚಟುವಟಿಕೆಯಲ್ಲಿ ಇವರು ತೊಡಗಿಸಿಕೊಂಡಿದ್ದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು , ಜಿ.ಪಂ.ಸದಸ್ಯ ತುಂಗಪ್ಪ ಎಂ.ಬಂಗೇರ, ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಸಹಿತ ಅನೇಕ ಗಣ್ಯರು ಇವರಿಗೆ ಸಂತಾಪ ಸೂಚಿಸಿದ್ದಾರೆ.