ಕಲ್ಲಡ್ಕ: ಶ್ರೀಕೃಷ್ಣ ಮಂದಿರ ಅಮ್ಟೂರು, ನವಜ್ಯೋತಿ ಮಿತ್ರಮಂಡಳಿ, ಜ್ಯೋತಿ ಮಹಿಳಾ ಮಂಡಲ ಅಮ್ಟೂರು ಇದರ ಸಂಯುಕ್ತ ಆಶ್ರಯದಲ್ಲಿ 33ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು. ಆಟೋಟ ಸ್ಪರ್ಧೆಗಳನ್ನು ಮೋಹನ ಆಚಾರ್ಯ ಇವರು ತೆಂಗಿನ ಕಾಯಿ ಹೊಡೆಯುವ ಮೂಲಕ ಉದ್ಘಾಟಿಸಿದರು. ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ, ಮತ್ತು ಮಹಿಳೆಯರಿಗೆ ಪ್ರತ್ಯೇಕ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ಅಧ್ಯಾಪಕರಾದ ಗಾಯತ್ರಿ ಮಾತಾಜಿ ಮಾತನಾಡಿ ಭಗವಾನ್ ಶ್ರೀಕೃಷ್ಣನ ಬಾಲ್ಯ ಲೀಲೆಗಳನ್ನು ತಿಳಿಸುತ್ತಾ ಜಗತ್ತಿಗೆ ನೀಡಿದ ಸಂದೇಶವನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜ್ಯೋತಿಷ್ಯ ಮನೋಜ್ ಕಟ್ಟೆಮಾರ್, ಭಾರತೀಯ ಸಂಸ್ಕøತಿ ಉಳಿಸುವ ದೃಷ್ಟಿಯಿಂದ, ಇಂತಹ ಕಾರ್ಯಕ್ರಮಗಳನ್ನು ಒಟ್ಟಾಗಿ ಆಚರಣೆ ಮಾಡುತ್ತಾ ಭಗವಾನ್ ಶ್ರೀಕೃಷ್ಣನ ಸಾಧನೆಗಳನ್ನು ತಿಳಿಸುವುದರಿಂದ ಮಕ್ಕಳಲ್ಲಿ ಮಾತ್ರವಲ್ಲದೇ ನಮ್ಮೆಲ್ಲರಲ್ಲಿಯೂ ಒಳ್ಳೆಯ ಭಾವನೆ ಮೂಡಲು ಸಾಧ್ಯವಾಗುವುದು ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಮಂದಿರದ ಅಧ್ಯಕ್ಷ ರಮೇಶ್ ಕರಿಂಗಾಣ, ಹಿರಿಯರಾದ ಮಹಾಬಲ ಶೆಟ್ಟಿ ನಂದಗೋಕುಲ ಉಪಸ್ಥಿತರಿದ್ದರು. ಕುಶಾಲಪ್ಪ ಅಮ್ಟೂರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸುರೇಶ್ ಅಮ್ಟೂರು ಧನ್ಯವಾದಗೈದರು.