ಕಿಲ್ಲೂರು ಶಾಲಾ ಮಕ್ಕಳಿಗೆ ದುರ್ಗಾ ಫ್ಯಾಮಿಲಿ ಟೂರ್ಸ್ ನ ವತಿಯಿಂದ ಬಟ್ಟಲು ಹಾಗೂ ಲೋಟ ವಿತರಣಾ ಕಾರ್ಯಕ್ರಮ – ಕಹಳೆ ನ್ಯೂಸ್
ಬೆಳ್ತಂಗಡಿ; ಈ ಹಿಂದೆ ಸುರಿದ ಭಾರೀ ಮಳೆಗೆ ಹಲವು ಕಡೆಯಲ್ಲಿ ಭಾರೀ ಪ್ರಕೃತಿ ವಿಕೋಪ ಮನೆ ಹಾನಿ ಹಾಗೂ ತುಂಬಾ ಸಮಸ್ಯೆಗಳಾಗಿದೆ. ಅದರಲ್ಲಿ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಗ್ರಾಮದಲ್ಲಿರುವ ”ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕಿಲ್ಲೂರು” ಇಲ್ಲಿಯ ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೆ ಬೇಕಾದ ಬಟ್ಟಲು ಹಾಗೂ ಸರಕಾರದ ವತಿಯಿಂದ ದೊರೆಯುವ ಹಾಲು ಕುಡಿಯಲು, ಲೋಟದ ಅವಶ್ಯಕವಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ತಿಳಿಸಿದರು.
ಈ ಹಿನ್ನಲೆಯಲ್ಲಿ ”ದುರ್ಗಾ ಫ್ಯಾಮಿಲಿ ಟೂರ್ಸ್”ನ ಅಧ್ಯಕ್ಷ ದೇವಿ ಪ್ರಸಾದ ಹೊಳ್ಳ ಮತ್ತು ಸದಸ್ಯರೆಲ್ಲಾ ಸೇರಿ ಬೇಕಾದ 200 ಬಟ್ಟಲು ಮತ್ತು ಲೋಟಗಳ ವಿತರಣಾ ಕಾರ್ಯಕ್ರಮ ನಡೆಯಿತು. ಶಾಲಾ ಮಕ್ಕಳಿಂದ ದೇವತಾ ಪ್ರಾರ್ಥನೆಯೊಂದಿಗೆ ಸಭೆಯು ಆರಂಭಗೊಂಡಿತು. ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಇದರ ಅಧ್ಯಕ್ಷ ಪ್ರಭಾಕರ ಪೂಜಾರಿ ವಹಿಸಿದ್ದರು. ಹಾಗೂ ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತಿ.ಎನ್.ಎಸ್ ಹಾಗೂ ಶಾಲಾ ಎಸ್.ಡಿ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಹಾಗೂ ದುರ್ಗಾ ಫ್ಯಾಮಿಲಿ ಟೂರ್ಸ್‍ನ ಅಧ್ಯಕ್ಷ ದೇವಿಪ್ರಸಾದ ಹೊಳ್ಳ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ನಂತರ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಮಾತನಾಡಿ ದುರ್ಗಾ ಫ್ಯಾಮಿಲಿ ಟೂರ್ಸ್ನಿ ನವರು ಮಾಡುವ ಸಮಾಜಮುಖಿ ಕಾರ್ಯಗಳಲ್ಲಿ ಈ ಬಟ್ಟಲು ಮತ್ತು ಲೋಟ ವಿತರಣಾ ಕಾರ್ಯವೂ ಒಂದು, ಇಲ್ಲಿ ಕಲಿಯುತ್ತಿರುವ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದರು.
ನಂತರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಟ್ಟಲು ಹಾಗೂ ಲೋಟ ವಿತರಣೆಯನ್ನು ಮಾಡಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಸ್ವಾಗತಿಸಿ, ಎ.ಜಿ.ಟಿ ಚಂದ್ರಶೇಖರ್ ಜಿ.ಎಸ್ ಪ್ರಸ್ತಾವಿಸಿದರು. ಸಹಶಿಕ್ಷಕಿ ಶಿಲ್ಪಾ.ಬಿ ನಿರೂಪಿಸಿ, ಸಹಶಿಕ್ಷಕಿ ವಿಜಯಕಿಣಿ ಧನ್ಯವಾದ ಮಾಡಿದರು.