Sunday, November 24, 2024
ರಾಜಕೀಯ

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕುರಿತು ಶಾಸಕರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ – ಕಹಳೆ ನ್ಯೂಸ್

ಕರ್ನಾಟಕ ವಿಧಾನ ಸಭೆ ಹಾಗೂ ವಿಧಾನ ಪರಿಷತ್‍ನಲ್ಲಿ 2010ರಲ್ಲಿ ರೈತರ ಜೀವನಾಡಿ ಹಾಗೂ ಲಕ್ಷಾಂತರ ಹಿಂದುಗಳ ಶ್ರದ್ಧಾ ಬಿಂದು ಹಾಗೂ ನೂರಾರು ಪ್ರಾಣಿ ದಯಾ ಸಂಘದ ಅಪೇಕ್ಷೆಯಂತೆ ಬಿಜೆಪಿ ಸರಕಾರ ಗೋ ವಂಶ ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ವಿಧೇಯಕವನ್ನು 2010ರಲ್ಲಿ ಜಾರಿಗೆ ತರುವ ಪ್ರಯತ್ನ ಮಾಡಿದ್ದು ಎರಡು ಶಾಸನ ಸಭೆಯಲ್ಲಿ ಅನುಮೋದನೆಗೊಂಡಿರುವ ಕಾಯ್ದೆಗೆ ರಾಜ್ಯಪಾಲರು ಅನುಮೋದನೆ ನೀಡದೆ ಅಸಹಕಾರ ನೀಡಿದ್ದರು.
ಆನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರ ಸದ್ರಿ ಕಾಯ್ದೆಯನ್ನು ವಾಪಸು ಪಡೆಯುವ ಮುಖಾಂತರ ರಾಜ್ಯದಲ್ಲಿ ಗೋಹತ್ಯೆ ನಡೆಯಲು ಅವಕಾಶ ಮಾಡಿಕೊಟ್ಟಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಆಡಳಿತಕ್ಕೆ ಬಂದಿದ್ದು ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಗೋಹತ್ಯೆ ನಿಷೇಧ ಕಾನೂನನ್ನು ಪುನಃ ಜಾರಿಗೊಳಿಸುವ ಅವಶ್ಯಕತೆ ಇದ್ದು 2010 ವಿಧೇಯಕವನ್ನು ಮತ್ತಷ್ಟು ಬಲಪಡಿಸುವಂತಹ ಅಂಶಗಳನ್ನು ಸೇರಿಸಿ, ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠ ರಚಿಸುವಂತೆ ಶಾಸಕರುಗಳಾದ, ಡಿ.ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ಸುನಿಲ್ ಕುಮಾರ್, ರಘುಪತಿ ಭಟ್ ಬಿಜೆಪಿ ಹಾಗೂ ಗೋಸಂರಕ್ಷಣಾ ಪ್ರಕೋಷ್ಠದ ರಾಜ್ಯ ಸಹಸಂಚಾಲಕ ವಿನಯ್ ಎಲ್ ಶೆಟ್ಟಿ. ಬಿಜೆಪಿ ಸಾಮಾಜಿಕ ಜಾಲ ತಾಣ ಪ್ರಕೋಷ್ಠದ ರಾಜ್ಯ ಸಹಸಂಚಾಲಕ ನಿತಿನ್ ಶೆಟ್ಟಿಯವರನ್ನೊಳಗೊಂಡ ನಿಯೋಗದೊಂದಿಗೆ ತೆರಳಿ, ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸನ್ಮಾನ್ಯ ಬಿ. ಎಸ್ ಯಡಿಯೂರಪ್ಪರರವರಿಗೆ ಮನವಿಯನ್ನು ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರು ಈ ಬಗ್ಗೆ ತಕ್ಷಣವೇ ಸರಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಿಯೋಗಕ್ಕೆ ಭರವಸೆ ನೀಡಿದರು.