Sunday, November 24, 2024
ಸುದ್ದಿ

ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿದ್ಯುತ್ ಬಿಲ್ ಪಾವತಿ ಮಾಡದ ಪರಿಣಾಮ ಪವರ್ ಕಟ್ ಪರಿಸ್ಥಿತಿ ನಿರ್ಮಾಣ – ಕಹಳೆ ನ್ಯೂಸ್

ಇಸ್ಲಾಮಾಬಾದ್: ಜಮ್ಮು- ಕಾಶ್ಮೀರದ ವಿಚಾರದಲ್ಲಿ ಕಾಲುಗೆದರಿ ಜಗಳಕ್ಕಿಳಿಯುತ್ತಿರುವ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸಚಿವಾಲಯದ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಪಾವತಿ ಮಾಡದ ಪರಿಣಾಮ ಪವರ್ ಕಟ್ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿ ತಿಳಿಸಿದೆ.

ಪಾಕಿಸ್ತಾನ ಮಾಧ್ಯಮದ ವರದಿ ಪ್ರಕಾರ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಚಿವಾಲಯ 41 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಿದೆ. ಬಾಕಿ 41 ಲಕ್ಷ ರೂಪಾಯಿ ಕೂಡಲೇ ಪಾವತಿಸುವಂತೆ ಇಸ್ಲಾಮಾಬಾದ್ ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ (ಐಇಎಸ್ ಸಿಒ) ಬುಧವಾರ ನೋಟಿಸ್ ಜಾರಿ ಮಾಡಿರುವುದಾಗಿ ವರದಿ ವಿವರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಕ್ ಪ್ರಧಾನಿ ಸಚಿವಾಲಯದ ಕಳೆದ ತಿಂಗಳ ವಿದ್ಯುತ್ ಬಿಲ್ ಪಾವತಿ ಮೊತ್ತ 35 ಲಕ್ಷ ರೂಪಾಯಿ ಆಗಿತ್ತು. ಈ ತಿಂಗಳು ಆ ಮೊತ್ತ 41ಲಕ್ಷಕ್ಕೆ ಏರಿಕೆಯಾಗಿದೆ. ವಿದ್ಯುತ್ ಬಿಲ್ ಅನ್ನು ಕೂಡಲೇ ಪಾವತಿಸುವಂತೆ ಈಗಾಗಲೇ ಹಲವು ಬಾರಿ ನೋಟಿಸ್ ನೀಡಿದ್ದರೂ ಕೂಡಾ ಹಣ ಪಾವತಿಯಾಗಿಲ್ಲ ಎಂದು ಐಇಎಸ್ ಸಿಒ ಆರೋಪಿಸಿರುವುದಾಗಿ ವರದಿ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು