ಪುತ್ತೂರು: ವಿಶ್ವ ಹಿಂದೂ ಪರಿಷತ್ ಭಜರಂಗದಳ ಮೊಸರು ಕುಡಿಕೆ ಉತ್ಸವ; ಸಾಹಸಮಯ ಅಟ್ಟಿ ಮಡಿಕೆ ಒಡೆಯುವ ಮೂಲಕ ವಿಜೃಂಭಣಾ ಮೆರವಣಿಗೆ- ಕಹಳೆ ನ್ಯೂಸ್
ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನದ ಅಂಗವಾಗಿ, ವಿಶ್ವಹಿಂದೂ ಪರಿಷತ್ ಬಜರಂಗದಳ ಪುತ್ತೂರು ಪ್ರಖಂಡ ಹಾಗೂ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ 11ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವವು ಇದೇ ಬರುವ ತಾರೀಖು ಆಗಸ್ಟ್31 ನೇ ಶನಿವಾರದಂದು ವಿಜೃಂಭಣೆಯಾಗಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ದೆಗಳು ನಡೆಯಲಿದ್ದು ಸಂಜೆ ಗಂಟೆ 3ಕ್ಕೆ ಸರಿಯಾಗಿ ಬೊಳುವಾರು ಶ್ರೀ ಅಂಜನೇಯ ಮಂತ್ರಾಲಯದಿಂದ ಆರಂಭಗೊಳ್ಳುವ ವಿಜ್ರಂಭಣೆಯ ಶೋಭಾಯಾತ್ರೆಯು ಮುಖ್ಯರಸ್ತೆಯ ಮೂಲಕ ಕಲ್ಲಾರೆಯಾಗಿ ಸಾಗಿ ಹಿಂದಿರುಗಿ ಆದರ್ಶ ಆಸ್ಪತ್ರೆಯಿಂದ ಎಡಕ್ಕೆ ತಿರುಗಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಮಾಪನಗೋಳ್ಳಲಿದೆ.
ಈ ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ವೀರ ಯುವಕರಿಂದ ಸಾಹಸಮಯ ಅಟ್ಟಿ ಮಡಿಕೆ ಒಡೆಯುವ ಸ್ಪರ್ದೆಯು ರಸ್ತೆಯುದ್ದಕ್ಕೂ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಜಾತಿ,ಪಕ್ಷ ಬೇದ ಮರೆತು ಎಲ್ಲಾ ಹಿಂದುಬಾಂಧವರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪುತ್ತೂರು ಬಜರಂಗದಳದ ತಾಲೂಕ್ ಸಂಚಾಲಕ ಹರೀಶ್ ಕುಮಾರ್ ದೋಳ್ಪಾಡಿ ತಿಳಿಸಿದ್ದಾರೆ.