Recent Posts

Monday, January 20, 2025
ರಾಜಕೀಯ

ಫಿಟ್ ಇಂಡಿಯಾ ಆಂದೋಲನಕ್ಕೆ ಮೋದಿ ಚಾಲನೆ: ಸ್ವಸ್ಥ ಮನಸ್ಸು, ದೇಹ ಹೊಂದಲು ಕರೆ – ಕಹಳೆ ನ್ಯೂಸ್

ನವದೆಹಲಿ: ಇಂದು ದೇಶದಾದ್ಯಂತ ರಾಷ್ಟ್ರೀಯ ಕ್ರೀಡಾ ದಿನದ ಸಂಭ್ರಮ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಸಮಾರಂಭದಲ್ಲಿ ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಅವರು ಜನರು ಸ್ವಸ್ಥ ಮನಸ್ಸು ಮತ್ತು ಸ್ವಸ್ಥ ದೇಹ ಹೊಂದಬೇಕು. ಹಾಗೂ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಗೆ ಫಿಟ್‍ನೆಸ್ ಜೊತೆ ನೇರ ಸಂಬಂಧವಿದೆ. ಆರೋಗ್ಯಕರ ಜೀವನ ನಡೆಸಲು ಫಿಟ್‍ನೆಸ್ ಅಗತ್ಯ. ಹೀಗಾಗಿ ‘ಫಿಟ್ ಇಂಡಿಯಾ ಆಂದೋಲನ’ಕ್ಕೆ ಚುರುಕುಮುಟ್ಟಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ಇಂದು ಮೇಜರ್ ಧ್ಯಾನ್ ಚಂದ್ ಎಂಬ ಮಹಾನ್ ಕ್ರೀಡಾಪಟು ಜನಿಸಿದ ದಿನ. ಅವರು ತಮ್ಮ ಫಿಟ್‍ನೆಸ್, ಶಕ್ತಿ ಮತ್ತು ಹಾಕಿ ಸ್ಟಿಕ್‍ನಿಂದ ಜಗತ್ತನ್ನೇ ಬೆರಗುಗೊಳಿಸಿದವರು’ ಎಂದು ಮೋದಿ ಶ್ಲಾಘಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜನರನ್ನು ಕ್ರೀಡೆ ಮತ್ತು ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ‘ಫಿಟ್ ಇಂಡಿಯಾ ಆಂದೋಲನ’ ದೇಶದಾದ್ಯಂತ ನಡೆಯುತ್ತಿದೆ. ಈ ಆಂದೋಲನದಲ್ಲಿ ಭಾಗವಹಿಸುವಂತೆ ಪ್ರಧಾನಿಯವರು ಈ ಹಿಂದೆ ‘ಮನದ ಮಾತು’ ರೇಡಿಯೊ ಕಾರ್ಯಕ್ರಮದಲ್ಲಿ ದೇಶದ ಜನತೆಗೆ ಕರೆ ನೀಡಿದ್ದರು.