Recent Posts

Monday, January 20, 2025
ಸುದ್ದಿ

ಫಿಲೋಮಿನಾದಲ್ಲಿ ‘ಆಕಾಶವಾಣಿ ಕಾರ್ಯಕ್ರಮಗಳ ಪ್ರಸ್ತುತಿ’ ಕುರಿತು ಕಾರ್ಯಾಗಾರ – ಕಹಳೆ ನ್ಯೂಸ್

ಪುತ್ತೂರು: ದಿನ ನಿತ್ಯ ನಾವು ಮಾಡುವ ಕೆಲಸಗಳು ಇದ್ದೇ ಇರುತ್ತದೆ. ಅದರೊಂದಿಗೆ ಇತರ ವಿಷಯಗಳ ಕುರಿತು ತಿಳಿದುಕೊಳ್ಳುವ ಕುತೂಹಲದ ಕಣ್ಣು ಕಿವಿಗಳು ನಮ್ಮಲ್ಲಿರಬೇಕು. ಹೊಸತನ್ನು ನೋಡುವ ಕೌತುಕತೆ ಬೆಳೆಸಿಕೊಳ್ಳುವುದು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ಮಂಗಳೂರು ಆಕಾಶವಾಣಿಯ ನಿಲಯ ನಿರ್ದೇಶಕಿ ಉಷಾಲತಾ ಎಸ್ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ರಂಗ ಕಲಾ ಸಂಘ, ಸ್ನಾತಕೋತ್ತರ ಮತ್ತು ಪದವಿ ಭೌತಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಇವುಗಳು ಮಂಗಳೂರು ಆಕಾಶವಾಣಿಯ ಸಹಯೋಗದೊಂದಿಗೆ ಕಾಲೇಜಿನ ಪೀಜಿ ಸಭಾಂಗಣದಲ್ಲಿ ಆಗಸ್ಟ್ 28ರಂದು ‘ಆಕಾಶವಾಣಿ ಕಾರ್ಯಕ್ರಮಗಳ ಪ್ರಸ್ತುತಿ’ ಕುರಿತು ಆಯೋಜಿಸಲಾದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು. ನಮ್ಮ ಪರಿಸರದಲ್ಲಿ ಹಲವಾರು ರೀತಿಯ ಪ್ರಾಣಿ ಪಕ್ಷಿಗಳು, ಗಿಡ ಮರಗಳು, ಗುಡ್ಡ ಬೆಟ್ಟಗಳು ಕಂಡು ಬರುತ್ತವೆ. ಇವುಗಳಲ್ಲಿ ಕಂಡು ಬರುವ ವೈವಿಧ್ಯತೆಗಳನ್ನು ಗಮನಿಸಿ, ಅಧ್ಯಯನ ಮಾಡುವ ಆಸಕ್ತಿ ಬೆಳೆಸಿಕೊಳ್ಳಬೇಕು. ಆಕಾಶವಾಣಿಯಲ್ಲಿ ಬೆಳಗ್ಗಿನಿಂದ ಆರಂಭಿಸಿ, ರಾತ್ರಿ ವರೆಗೆ ಹಲವಾರು ವಿಷಯಗಳು ಪ್ರಸ್ತುತಗೊಳ್ಳುತ್ತದೆ. ಇವುಗಳನ್ನು ಕೇಳಿದರೇನೇ ನಮ್ಮ ಜ್ಞಾನ ಸಂಪತ್ತು, ಭಾಷಾ ಸಂಪತ್ತು ವೃದ್ಧಿಯಾಗುತ್ತದೆ. ಉತ್ತಮ ಹವ್ಯಾಸಗಳನ್ನು ಬದುಕಿನ ಕೊನೆ ತನಕ ಬೆಳೆಸಿಕೊಳ್ಳಿ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗೌರವ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ದೇವು ಹನೆಹಳ್ಳಿ ಮಾತನಾಡಿ, ಬುದ್ಧಿ ಭಾವ ಇರುವ ಎಲ್ಲಾ ಜೀವಿಗಳಿಗೂ ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವ ಅನಿವಾರ್ಯತೆಯಿದೆ. ಪ್ರಸ್ತುತ ನಾವು ಅಭಿವ್ಯಕ್ತಿಯ ಹಲವಾರು ಮಾಧ್ಯಮಗಳನ್ನು ಕಳೆದುಕೊಂಡಿದ್ದೇವೆ. ಇಂದಿನ ಕಾಲಘಟ್ಟದಲ್ಲಿ ಬರೆಯುವುದು ಅಭಿವ್ಯಕ್ತಿಯ ಒಂದು ಒಳ್ಳೆಯ ಮಾಧ್ಯಮ. ಹಿಂದೆ ಕಲಾವಿದ ಪ್ರೇಕ್ಷಕರಲ್ಲಿ ಪರಸ್ಪರ ಭೇದವಿರಲಿಲ್ಲ. ಈಗ ಕಲಾವಿದ ಬೇರೆ, ಪ್ರೇಕ್ಷಕ ಬೇರೆಯಾಗಿ ಕಂಡು ಬರುತ್ತದೆ ಎಂದರು.

ಗೌರವ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಎಲ್ಲಾ ಜೀವಿಗಳಲ್ಲಿಯೂ ಅಗಾಧವಾದ ಶಕ್ತಿ ಸಾಮಥ್ರ್ಯ ಅಡಗಿರುತ್ತದೆ. ಸಾಮಥ್ರ್ಯದ ಸದ್ಭಳಕೆ ಮಾಡಿಕೊಂಡಾಗ ಶ್ರೇಷ್ಠತೆ ಒಲಿದು ಬರುವುದರಲ್ಲಿ ಸಂದೇಹವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಜೀವನದ ಪ್ರತಿ ಕ್ಷಣದಲ್ಲಿಯೂ ಹೊಸತನ ಕಂಡು ಬರುತ್ತವೆ. ಅವುಗಳನ್ನು ಅರಿತುಕೊಳ್ಳುವುದರಲ್ಲಿ ಮಾಧ್ಯಮಗಳು ಬಹಳಷ್ಟು ಸಹಕಾರಿ. ವಿದ್ಯಾರ್ಥಿ ಬದುಕಿನಲ್ಲಿ ಅವಕಾಶಗಳನ್ನು ಬಳಸಿಕೊಂಡಾಗ ಉತ್ತಮ ಕಲಾವಿದರೆನಿಸಿಕೊಳ್ಳಲೂ ಸಾಧ್ಯವಿದೆ ಎಂದರು.

ಈ ಕಾರ್ಯಾಗಾರದಲ್ಲಿ ಮಂಗಳೂರು ಆಕಾಶವಾಣಿಯ ತಾಂತ್ರಿಕ ಸಿಬ್ಬಂದಿ ಚಂದ್ರಶೇಖರ ಬಿ ಎಮ್ ಮತ್ತು ಫೆಲಿಕ್ಸ್ ಎಸ್ ಭಾಗವಹಿಸಿದರು. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಕೆ ಪ್ರಸನ್ನ ರೈ, ಹಿಂದಿ ವಿಭಾಗದ ಮುಖ್ಯಸ್ಥೆ ಡಾ| ಡಿಂಪಲ್ ಫೆರ್ನಾಂಡಿಸ್, ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಭಾರತಿ ಎಸ್ ರೈ ಮತ್ತು ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ದೀಪಕ್ ಇ ಡಿ’ಸಿಲ್ವ ಸಹಕರಿಸಿದರು.