ಪುತ್ತೂರು: ಉಡುಪಿ ಜಿಲ್ಲಾ ಅಮೇಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಮತ್ತು ಕರ್ನಾಟಕ ರಾಜ್ಯ ಅಮೇಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಇವುಗಳ ಜಂಟಿ ಆಶ್ರಯದಲ್ಲಿ ಉಡುಪಿಯ ಅಜ್ಜರಕಾಡಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿದ ರಾಜ್ಯ ಜೂನಿಯರ್ ಅಮೇಚೂರ್ ಅಥ್ಲೆಟಿಕ್ ಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಪುತ್ತೂರಿನ ಸಂತ ಫಿಲೋಮಿನಾದ ವಿದ್ಯಾಥಿಗಳು ಒಟ್ಟು ಐದು ಪದಕಗಳನ್ನು ಜಯಿಸಿರುತ್ತಾರೆ.
20 ವರ್ಷದ ಒಳಗಿನ ವಯೋಮಿತಿಯಲ್ಲಿ ಪ್ರಥಮ ಕಲಾ ವಿಭಾಗದ ದೀಕ್ಷಿತ್ ಎಮ್ ಇವರು 10,000 ಮೀ. ನಡಿಗೆ ಸ್ಪರ್ದೆಯಲ್ಲಿ ಬೆಳ್ಳಿ ಪದಕ ಪಡೆದರು. ಈಟಿ ಎಸೆತದಲ್ಲಿ ಪ್ರಥಮ ಕಲಾ ವಿಭಾಗದ ಕೆ ಹಿಶಾಮ್ ಅಹ್ಮದ್ ಬೆಳ್ಳಿ ಪದಕ ಪಡೆದರೆ, ಇದೇ ಸ್ಪರ್ಧೆಯಲ್ಲಿ ಪ್ರಥಮ ವರ್ಷದ ಸಮಾಜ ಕಾರ್ಯದ ಅಕ್ಷಯ್ ಲಾಲ್ ಇವರು ಕಂಚಿನ ಪದಕದ ಸಾಧನೆ ಮಾಡಿದರು.
18 ವರ್ಷದ ಒಳಗಿನ ವಯೋಮಿತಿಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಭವಿತ್ ಇವರು ತ್ರಿವಿಧ ಜಿಗಿತದಲ್ಲಿ ಕಂಚಿನ ಪದಕ ಪಡೆದರು. 18 ವರ್ಷದ ಒಳಗಿನ ಬಾಲಕಿಯರ 5,000 ಮೀ. ನಡಿಗೆ ಸ್ಪರ್ದೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ರಕ್ಷಾ ಅಂಚನ್ ಇವರು ಕಂಚಿನ ಪದಕ ತನ್ನದಾಗಿಸಿಕೊಂಡಿರುವರು.