Saturday, November 23, 2024
ಸುದ್ದಿ

ಫಿಲೋಮಿನಾದಲ್ಲಿ ಪರಿಸರ ಸಂಘದ ಸದಸ್ಯರಿಗೆ ಪುಳಿತ್ತಡಿಯಲ್ಲಿ ಕೃಷಿ ಜಾಗೃತಿ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಪರಿಸರ ಸಂಘವು ಪ್ರಾಚೀನ ಕೃಷಿ ಸಂಸ್ಕೃತಿಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ, ಪುತ್ತೂರು ತಾಲೂಕಿನ ಪುಳಿತ್ತಡಿ ಜಗದೀಶ್ ಕುಮಾರ್ ಮತ್ತು ಕಲಾವತಿ ಇವರ ಗದ್ದೆಯಲ್ಲಿ ಕೃಷಿ ಚಟುವಟಿಕೆಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಪರಿಸರ ಸಂಘದ 80 ಸದಸ್ಯರು ಗದ್ದೆಯನ್ನು ನಾಟಿಗೆ ಸಿದ್ದಗೊಳಿಸುವುದು, ನೇಜಿ ನೆಡುವುದು ಮುಂತಾದ ಕೆಲಸಗಳಲ್ಲಿ ಭಾಗವಹಿಸಿ, ಭತ್ತದ ಕೃಷಿಯ ಕುರಿತು ಪ್ರಾಯೋಗಿಕ ಜ್ಞಾನ ಪಡೆದರು. ಇದೇ ಸಂದರ್ಭದಲ್ಲಿ ಮನೋರಂಜನೆಗಾಗಿ ವಿದ್ಯಾರ್ಥಿಗಳಿಗೆ ಕಬಡ್ಡಿ, ಹಗ್ಗ ಜಗ್ಗಾಟ ಮುಂತಾದ ಆಟಗಳನ್ನು ಸಂಯೋಜಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಸಂಘಟನೆಯಲ್ಲಿ ಕಾಲೇಜಿನ ಪರಿಸರ ಸಂಘದ ನಿರ್ದೇಶಕ ನಾಗರಾಜು ಎಂ, ರಕ್ಷಿತಾ ಆರ್ ಬಿ, ಸ್ಮಿತಾ ವಿವೇಕ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಊಟೋಪಚಾರವನ್ನು ವ್ಯವಸ್ಥೆಗೊಳಿಸಿದ ಪುಳಿತ್ತಡಿ ಮನೆಯ ಸದಸ್ಯರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.