Saturday, November 23, 2024
ಸುದ್ದಿ

ತಮಿಳುನಾಡಿನ ಐದು ಕಡೆ ದಿಢೀರ್ ದಾಳಿ ನಡೆಸಿ ಕೆಲವರನ್ನು ವಶಕ್ಕೆ ಪಡೆದುಕೊಂಡ ರಾಷ್ಟ್ರೀಯ ತನಿಖಾ ದಳ – ಕಹಳೆ ನ್ಯೂಸ್

ತಮಿಳುನಾಡು : ರಾಷ್ಟ್ರೀಯ ತನಿಖಾ ದಳವು ಕೊಯಮತ್ತೂರು ಸೇರಿದಂತೆ ತಮಿಳುನಾಡಿನ ಐದು ಕಡೆ ದಿಢೀರ್ ದಾಳಿ ನಡೆಸಿ ಕೆಲವರನ್ನು ವಶಕ್ಕೆ ಪಡೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಂಶಯಾಸ್ಪದ ವ್ಯಕ್ತಿಗಳಿಂದ ಲ್ಯಾಪ್ ಟಾಪ್, ಮೊಬೈಲ್, ಪೆನ್ ಡ್ರೈವ್ ಮತ್ತಿತರ ವಿದ್ಯುನ್ಮಾನ ಪರಿಕರಗಳನ್ನು ಎನ್‍ಐಎ ವಶಪಡಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯಕ್ಕೆ ಮಾಧ್ಯಮಗಳಿಗೆ ಲಭಿಸಿರುವ ಮಾಹಿತಿಯಂತೆ, ಎನ್‍ಐಎ ವಶಪಡಿಸಿಕೊಂಡಿರುವ ವ್ಯಕ್ತಿಗಳ ಸಂಖ್ಯೆಯನ್ನಾಗಲೀ ಅಥವಾ ವಿವರವನ್ನು ನೀಡಬೇಕಿದೆ. ಪ್ರಕರಣದ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡು ದಿನಗಳ ಹಿಂದಷ್ಟೇ ಶ್ರೀಲಂಕಾ ಕಡೆಯಿಂದಲೂ ಉಗ್ರರು ನುಸುಳಿರುವ ಸಾಧ್ಯತೆ ಇದೆ ಎಂದು ಕೇಂದ್ರ ಸರಕಾರ ಎಲ್ಲಾ ರಾಜ್ಯ ಸರಕಾರಗಳಿಗೂ ನಗರಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಾರವಾರ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಎಲ್ಲೆಡೆ ಕರಾವಳಿಯಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.