ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ಲಾಸ್ಟಿಕ್ ಬ್ಯಾಗ್, ಕಪ್ಸ್ ಹಾಗೂ ಸ್ಟ್ರಾ ಸೇರಿದಂತೆ ಎಲ್ಲಾ ವಿಧದ ಪ್ಲಾಸ್ಟಿಕ್ ವಸ್ತುಗಳಿಗೆ ಅಕ್ಟೋಬರ್ 2ರಿಂದ ನಿಷೇಧ ಹೇರಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ರಾಷ್ಟ್ರಪಿತ ಮಹಾತ್ಮಗಾಂಧಿ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಿಂದ ಏರ್ ಇಂಡಿಯಾದ ಎಲ್ಲಾ ವಿಮಾನಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಮೊದಲ ಹಂತದಲ್ಲಿ ಏರ್ ಇಂಡಿಯಾ ಸಹಭಾಗಿತ್ವದ ವಿಮಾನದಲ್ಲಿ ಹಾಗೂ ಎರಡನೇ ಹಂತದಲ್ಲಿ ಏರ್ ಇಂಡಿಯಾ ವಿಮಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುವುದು ಎಂದು ವಿವರಿಸಿದೆ.
ಏರ್ ಇಂಡಿಯಾದಲ್ಲಿ ವಿಶೇಷ ಊಟವನ್ನು ಪ್ಲಾಸ್ಟಿಕ್ ತಟ್ಟೆಯಲ್ಲಿ ನೀಡಲಾಗುತ್ತಿದ್ದು, ಇನ್ಮುಂದೆ ಪರಿಸರ ಸ್ನೇಹಿ ಸಾಧನ ಬಳಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ. ಪ್ಲಾಸ್ಟಿಕ್ ಟಂಬ್ಲಸ್ರ್ಸ್, ಟೀ ಕಪ್‍ಗಳ ಬದಲಾಗಿ ಪೇಪರ್ ಕಪ್ ಬಳಕೆ ಮಾಡಲಾಗುವುದು ಎಂದು ತಿಳಿಸಿದೆ.