Tuesday, January 21, 2025
ಸಿನಿಮಾ

ಮತ್ತೆ ತೆರೆ ಕಾಣಲಿದೆ ನಿಷ್ಕರ್ಷ – ಕಹಳೆ ನ್ಯೂಸ್

ವಿಷ್ಣುವರ್ಧನ್ ಅಭಿನಯದ ನಿಷ್ಕರ್ಷ ಸಿನಿಮಾದ ಡಿಜಿಟಲೀಕರಿಸಿದ ಆವೃತ್ತಿ ಬಿಡುಗಡೆಯಾಗುತ್ತಿದೆ. ಸೆಪ್ಟೆಂಬರ್ 18 ರಂದು ವಿಷ್ಣುವರ್ಧನ್ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ನಿಷ್ಕರ್ಷ ಸಿನಿಮಾ ಮರುಬಿಡುಗಡೆಯಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದ ಸಿನಿಮಾವನ್ನು ಮರುಬಿಡುಗಡೆ ಮಾಡುವ ಹೊಣೆಯನ್ನು ಬಿಸಿ ಪಾಟೀಲ್ ಹೊತ್ತಿದ್ದಾರೆ. ಸೃಷ್ಟಿ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಸೆಪ್ಟೆಂಬರ್ 18 ರಂದು ತೆರೆಕಾಣಲಿದೆ. ಸಿನಿಮಾದ ವಿತರಣೆ ಹಕ್ಕನ್ನು ಜಯಣ್ಣ ಕಂಬೈನ್ಸ್ ವಹಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಲಿವುಡ್‍ನ ಡೈ ಹಾರ್ಡ್ ಸಿನಿಮಾದಿಂದ ಪ್ರೇರಣೆ ಪಡೆದು ಈ ಸಿನಿಮಾವನ್ನು ನಿರ್ದೇಶನ ಮಾಡಲಾಗಿತ್ತು. ಅನಂತ್ ನಾಗ್, ಸುಮನ್ ನಗರ್‍ಕರ್, ರಮೇಶ್ ಭಟ್ ತಾರಾಗಣದಲ್ಲಿದ್ದರು.