Sunday, November 24, 2024
ಸುದ್ದಿ

ಉಗ್ರರು ಒಳನುಸುಳಿರುವ ಮಾಹಿತಿ; ಕರಾವಳಿಯಲ್ಲಿ ಮುಂದುವರಿದ ಹೈಅಲರ್ಟ್ – ಕಹಳೆ ನ್ಯೂಸ್

ಮಂಗಳೂರು: ತಮಿಳುನಾಡಿನ ಮೂಲಕ 6 ಮಂದಿ ಉಗ್ರರು ಒಳನುಸುಳಿರುವ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಕರಾವಳಿ ತೀರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕರಾವಳಿಯಲ್ಲಿ ಕಟ್ಟುನಿಟ್ಟಿನ ಭದ್ರತೆ ಮುಂದುವರೆದಿದ್ದು, ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ.

ಸಮುದ್ರದಲ್ಲಿ ನಡೆಯುವ ಚಟುವಟಿಕೆಗಳ ಮೇಲೂ ನಿಗಾವಹಿಸಲಾಗಿದ್ದು, 15 ದಿನಗಳಿಂದ ಕಡಲ ತೀರದಲ್ಲಿ ಪೊಲೀಸ್ ಪಡೆ ಸೇರಿದಂತೆ ಕರಾವಳಿ ಕಾವಲು ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಸಮುದ್ರದಲ್ಲಿ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಹಾಗೂ ಕಡಲ ತೀರದಲ್ಲಿ ಶಂಕಿತ ಬೋಟ್ ಮತ್ತು ವ್ಯಕ್ತಿಗಳು ಕಂಡುಬಂದರೆ ಮಾಹಿತಿ ನೀಡುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಕೆಟ್, ಮಾಲ್, ಆಸ್ಪತ್ರೆ, ಬಸ್ಸು, ರೈಲು ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ವಾಹನಗಳ ಮೇಲೆ ಸರಕಾರಿ ಲಾಂಛನವನ್ನು ಅನಧಿಕೃತವಾಗಿ ಬಳಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸಮುದ್ರದಲ್ಲಿ ಭಾರತೀಯ ತಟ ರಕ್ಷಣಾ ಪಡೆಯ ಹಡಗುಗಳು ಗಸ್ತು ತಿರುಗುತ್ತಿದ್ದು, ಭಾರತೀಯ ನೌಕಾ ಪಡೆ ಕೂಡ ಸನ್ನದ್ಧಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು