Saturday, November 23, 2024
ಸುದ್ದಿ

ತಿರುಮಲ ದೇವಾಲಯದಲ್ಲಿ ಹಿಂದೂಯೇತರ ನೌಕರರು ಕೆಲಸ ಮಾಡುವಂತಿಲ್ಲ – ವೈಎಸ್ ಜಗನ್ ಸರ್ಕಾರದ ಮಹತ್ವದ ನಿರ್ಧಾರ- ಕಹಳೆ ನ್ಯೂಸ್

ತಿರುಮಲದಲ್ಲಿ ಸಂಚರಿಸುವ ಆಂಧ್ರಪ್ರದೇಶ ಸರ್ಕಾರದ ಸಾರಿಗೆ ಬಸ್‍ಗಳ ಟಿಕೆಟ್‍ನಲ್ಲಿ ಕ್ರೈಸ್ತ ಮತ ಪ್ರಚಾರ ನಡೆಯುತ್ತಿದೆ ಎಂಬ ಆರೋಪ ಕೆಲದಿನಗಳ ಹಿಂದೆ ಕೇಳಿ ಬಂದಿತ್ತು. ಜೊತೆಗೆ ಬಿಜೆಪಿಯಿಂದ ಸಾರಿಗೆ ಸಂಸ್ಥೆ ಎದುರು ಪ್ರತಿಭಟನೆ ಕೂಡ ನಡೆದಿತ್ತು. ಈ ವಿವಾದದ ಬೆನ್ನಲ್ಲೆ ಇದೀಗ ವೈಎಸ್ ಜಗನ್ ನೇತೃತ್ವದ ಸರಕಾರ, ಹೊಸ ಬದಲಾವಣೆ ತರಲು ಮುಂದಾಗಿದೆ.

“ದೇವಾಲಯದಲ್ಲಿ ಕಾರ್ಯ ನಿರ್ವಹಿಸುವ ಹಿಂದೂಯೇತರ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗುವುದು” ಎಂದು ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಎಲ್.ವಿ.ಸುಬ್ರಹ್ಮಣ್ಯಂ ಹೇಳಿದ್ದಾರೆ. ಇವರು ಟಿಟಿಡಿ ಅಧಿಕಾರಿಗಳನ್ನು ಭೇಟಿಯಾದ ನಂತರ ಈ ತೀರ್ಮಾಣವನ್ನ ಕೈಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾರ್ವಜನಿಕರು ತಮ್ಮ ಧರ್ಮಗಳನ್ನು ಬದಲಾಯಿಸಲು ಸ್ವತಂತ್ರರು, ಯಾರೂ ಅದನ್ನು ವಿರೋಧಿಸಲು ಸಾಧ್ಯವಿಲ್ಲ. ಆದರೆ, ಹಿಂದೂಯೇತರರು ಇಲ್ಲಿ ಕೆಲಸವನ್ನು ಮಾಡುತ್ತಿದ್ದರೆ, ಅಂತವರನ್ನು ಇಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುತ್ತದೆ ” ಎಂದು ದೇವಾಲಯದ ಆಡಳಿತ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಟಿಕೇಟ್ ವಿಚಾರಕ್ಕೆ ಆರ್‍ಟಿಸಿ ಡಿಪೋ ವ್ಯವಸ್ಥಾಪಕರು ಪ್ರತಿಕ್ರಿಯಿಸಿದ್ದು, ನಮ್ಮ ಟಿಕೆಟ್‍ನಲ್ಲಿ ಯಾವುದೇ ಜಾಹೀರಾತು ಇರುವುದಿಲ್ಲ, ಇದು ಬೇರೆ ಡಿಪೋದ ಬಸ್ ಟಿಕೆಟ್ ಆಗಿದೆ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.