Saturday, November 23, 2024
ಸುದ್ದಿ

ಬೇಡಿಕೆ ಕಳೆದುಕೊಂಡ 2000 ರೂಪಾಯಿ ನೋಟು- ಕಹಳೆ ನ್ಯೂಸ್

ಮುಂಬೈ: ನೋಟು ರದ್ದತಿ ಬಳಿಕ ಬಳಕೆಗೆ ಬಂದ 2000 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಪ್ರಸ್ತುತ ಚಲಾವಣೆಯಲ್ಲಿರುವ 2000 ರೂಪಾಯಿ ನೋಟುಗಳ ಪ್ರಮಾಣ 2019ನೇ ಹಣಕಾಸು ವರ್ಷದಲ್ಲಿ 7.2ಕೋಟಿಯಷ್ಟು ಕುಸಿತ ಕಂಡು 329 ಕೋಟಿಗೆ ಇಳಿದಿದೆ.

ರದ್ದತಿಯಾದ ನೋಟುಗಳಿಗೆ ಬದಲಿಯಾಗಿ ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿಯ ನೋಟುಗಳನ್ನು ಬೃಹತ್ ಪ್ರಮಾಣದಲ್ಲಿ ಚಲಾವಣೆಗೆ ತಂದಿತ್ತು. ಆದರೆ ಇದೀಗ ಆರ್‌ಬಿಐ ತನ್ನ ಗಮನವನ್ನು ಇತರ ನೋಟುಗಳ ಕಡೆಗೆ ಹರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

2017ರ ಮಾರ್ಚ್‍ನಲ್ಲಿ ರದ್ದತಿಯಾದ ಎಲ್ಲ ನೋಟುಗಳನ್ನು ವಿನಿಮಯ ಮಾಡಿದ ಬಳಿಕ 2000 ರೂಪಾಯಿ ನೋಟುಗಳು ಒಟ್ಟು ಚಲಾವಣೆಯಲ್ಲಿರುವ ನೋಟುಗಳ ಮೌಲ್ಯದ ಶೇಕಡ 50ರಷ್ಟಿದ್ದವು. ಒಂದು ವರ್ಷ ಬಳಿಕ 2000 ರೂಪಾಯಿ ನೋಟುಗಳ ಪ್ರಮಾಣ ಶೇಕಡ 37ಕ್ಕೆ ಇಳಿದರೆ ಇದೀಗ ಶೇಕಡ 31ಕ್ಕೆ ಕುಸಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತರ ಎಲ್ಲ ಬ್ಯಾಂಕ್ ನೋಟುಗಳ ಚಲಾವಣೆಯಲ್ಲಿ ಏರಿಕೆ ಕಂಡುಬಂದಿದೆ. ಅತಿಹೆಚ್ಚು ಏರಿಕೆ ಕಂಡುಬಂದಿರುವುದು 500 ರೂಪಾಯಿ ನೋಟುಗಳಲ್ಲಿ. ಒಟ್ಟು ಚಲಾವಣೆಯಲ್ಲಿರುವ 21.1 ಲಕ್ಷ ಕೋಟಿ ಮೌಲ್ಯದ ನೋಟುಗಳ ಪೈಕಿ ಶೇಕಡ 51ರಷ್ಟು 500 ರೂಪಾಯಿ ನೋಟುಗಳಿವೆ. ಒಟ್ಟು 2151 ಕೋಟಿ 500 ರೂಪಾಯಿ ನೋಟುಗಳು ಚಲಾವಣೆಯಲ್ಲಿದ್ದು, ಚಲಾವಣೆಯಲ್ಲಿರುವ 100 ರೂಪಾಯಿ ನೋಟುಗಳ ಸಂಖ್ಯೆ 2007 ಕೋಟಿ.

10 ರೂಪಾಯಿ ಮೌಲ್ಯದ 3128 ಕೋಟಿ ನೋಟುಗಳು ಚಲಾವಣೆಯಲ್ಲಿವೆ. ಆರ್‌ಬಿಐ ಮೂಲಗಳ ಪ್ರಕಾರ, ನೋಟು ಮುದ್ರಣದ ಬೇಡಿಕೆಯು 2018-19ರಲ್ಲಿ ಹಿಂದಿನ ವರ್ಷಕ್ಕಿಂತ ಶೇಕಡ 5.6ರಷ್ಟು ಕಡಿಮೆಯಾಗಿದೆ. ಆದಾಗ್ಯೂ ನೋಟು ಪೂರೈಕೆ ಹಿಂದಿನ ವರ್ಷಕ್ಕಿಂತ ಅಧಿಕವಾಗಿದೆ.

10 ರೂಪಾಯಿ ಮತ್ತು 100 ರೂಪಾಯಿ ನೋಟುಗಳು ಒಟ್ಟು ಚಲಾವಣೆಯಲ್ಲಿರುವ ನೋಟುಗಳ ಶೇಕಡ 47.2ರಷ್ಟಿವೆ.