Recent Posts

Sunday, January 19, 2025
ಸಿನಿಮಾ

ಪವರ್ ಸ್ಟಾರ್ ಕಂಠದಲ್ಲಿ ಕೆಚ್ಚೆದೆಯ ಕನ್ನಡಿಗರಿಗಾಗಿ ಗೀತಾ ಸಿನಿಮಾದಲ್ಲೊಂದು ಗೀತೆ – ಕಹಳೆ ನ್ಯೂಸ್

ಗೀತಾ ಸಿನಿಮಾದ ಕಥೆಯು ಕನ್ನಡ ಚಳುವಳಿ ಹಾಗೂ ಹೋರಾಟಗಳ ಮೇಲೆ ಮಾಡಲಾದ ಚಿತ್ರಕಥೆಯನ್ನು ಹೊಂದಿದ್ದು, ಈಗಾಗಲೇ ಚಿತ್ರದ ಟೀಸರ್ ಜನರನ್ನು ಮೋಡಿ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕನ್ನಡಿಗ ಹಾಡಿಗೂ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ‘ಗೀತಾ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸುವ ಈ ಹಾಡಿಗೆ ಕಂಚಿನ ಕಂಠ ಧಾರೆಯೆರೆದದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್.

ಕನ್ನಡದ ಕಾಳಜಿ, ಕನ್ನಡದ ಅರಿವು, ಕನ್ನಡಿಗರಿಗಾಗಿ ಮಾಡಿರುವ ಈ ಗೀತೆಗೆ ಸಾಹಿತ್ಯ ಒದಗಿಸಿರುವುದು ಖ್ಯಾತ ನಿರ್ದೇಶಕ ಸಂತೋಷ್ ಆನಂದ್‍ರಾಮ್. ಕನ್ನಡವೇ ಸತ್ಯ…ಎಂದು ಆರಂಭಾಗುವ ಕನ್ನಡಿಗರ ಹಾಡಿಗೆ ಅನೂಪ್ ರುಬೆನ್ಸ್ ರಾಗ ಸಂಯೋಜಿಸಿದ್ದಾರೆ. ಸದ್ಯ ಚಿತ್ರತಂಡ ಲಿರಿಕಲ್ ವಿಡಿಯೋವನ್ನು ಮಾತ್ರ ಬಿಡುಗಡೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡ ಕನ್ನಡ ಕನ್ನಡವೇ ಸತ್ಯ..ಕನ್ನಡ ಕನ್ನಡ ಕನ್ನಡವೇ ನಿತ್ಯ…ಕನ್ನಡದ ಗರಿಮೆ,ಹಿರಿಮೆ ಸಾರುತ್ತ, ಮೈ ನವಿರೇಳಿಸುವ ಈ ಹಾಡು ನಮ್ಮೆಲ್ಲಾ ಕೆಚ್ಚೆದೆಯ ಕನ್ನಡ ಹೋರಾಟಗಾರರಿಗೆ, ಗೋಕಾಕ್ ಹೋರಾಟದಲ್ಲಿ ಹೋರಾಡಿದ ಕಲಿಗಳಿಗೆ, ಸ್ವಾಭಿಮಾನಿ ಕನ್ನಡಿಗ ಬಂಧುಗಳಿಗೆ ಈ ಗೀತೆಯನ್ನು ಗೋಲ್ಡನ್ ಸ್ಟಾರ್ ಗಣೇಶ್ ಅರ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಗೀತಾ’ ಸಿನಿಮಾದ ಕಥೆಯು ಕನ್ನಡ ಚಳುವಳಿ ಹಾಗೂ ಹೋರಾಟಗಳ ಮೇಲೆ ಮಾಡಲಾದ ಚಿತ್ರಕಥೆಯನ್ನು ಹೊಂದಿದ್ದು, ಈಗಾಗಲೇ ಚಿತ್ರದ ಟೀಸರ್ ಜನರನ್ನು ಮೋಡಿ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕನ್ನಡಿಗ ಹಾಡಿಗೂ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.

ಸೈಯದ್ ಸಲಾಂ ಮತ್ತು ಶಿಲ್ಪಾ ಗಣೇಶ್ ಬಂಡವಾಳ ಹಾಕಿರುವ ಈ ಚಿತ್ರಕ್ಕೆ ವಿಜಯ್ ನಾಗೇಂದ್ರ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಸಿನಿಮಾದಲ್ಲಿ ಗೋಲ್ಡನ್ ಗಣಿಗೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್, ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ್ ತೆರೆ ಹಂಚಿಕೊಳ್ಳಲಿದ್ದಾರೆ. ಇವರೊಂದಿಗೆ ಮುಖ್ಯ ಪಾತ್ರದಲ್ಲಿ ದೇವರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಅವರು ಕೂಡ ಕಾಣಿಸಲಿದ್ದಾರೆ.