Recent Posts

Sunday, January 19, 2025
ಕ್ರೀಡೆ

ಇಂದಿನಿಂದ ವಿಂಡೀಸ್-ಭಾರತ ಎರಡನೇ ಟೆಸ್ಟ್; ಸರಣಿ ಕ್ಲೀನ್ ಸ್ವೀಪ್ ಕನಸಿನಲ್ಲಿ ಟೀಂ ಇಂಡಿಯಾ! – ಕಹಳೆ ನ್ಯೂಸ್

ಬೆಂಗಳೂರು : ವೆಸ್ಟ್ ಇಂಡೀಸ್ ಪ್ರವಾದಲ್ಲಿರುವ ಭಾರತ ಇಂದಿನಿಂದ ಅಂತಿಮ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಈಗಾಗಲೇ ಮೊದಲ ಟೆಸ್ಟ್ ಗೆದ್ದಿರುವ ಕೊಹ್ಲಿ ಪಡೆ, ಈ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ಯೋಜನೆ ಹಾಕಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟೀಂ ಇಂಡಿಯಾದಲ್ಲಿ ಬಹುತೇಕ ಕಳೆದ ಗೆಲುವಿನ ತಂಡದ ಆಟಗಾರರೇ 2ನೇ ಟೆಸ್ಟ್ ನಲ್ಲು ಇಳಿಸುವ ಯೋಜನೆಯಿದೆ. ಒಂದು ವೇಳೆ ಬದಲಾವಣೆ ಮಾಡಿದರೆ ಆರ್. ಅಶ್ವಿನ್ ತಂಡ ಸೇರಿಕೊಳ್ಳುವ ನಿರೀಕ್ಷೆ ಇದೆ. ಹಾಗಾದಲ್ಲಿ ಯಾವ ಆಟಗಾರ ಹೊರಗುಳಿಯುತ್ತಾನೆ ಎಂಬುದು ಆಮೇಲೆ ತಿಳಿಯಬೇಕಷ್ಟೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಪದೇಪದೇ ಎಡವುತ್ತಿದೆ. ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮೊದಲ ಟೆಸ್ಟ್ ನಲ್ಲಿ ಸಂಪೂರ್ಣ ವಿಫಲರಾಗಿದ್ದರು. ಕೆ ಎಲ್ ರಾಹುಲ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಇವರಿಬ್ಬರ ಮೇಲೆ ಈಬಾರಿ ಹೆಚ್ಚಿನ ನಿರೀಕ್ಷೆಯಿದೆ. ಜೊತೆಗೆ ರಿಷಭ್ ಪಂತ್ ವೈಫಲ್ಯ ಅನುಭವಿಸುತ್ತಿದ್ದು, ವೃದ್ದಿಮಾನ್ ಸಾಹ ಅವಕಾಶ ಪಡೆದರೂ ಪಡೆಯಬಹುದು.