ಟ್ರಬಲ್ ಶೂಟರ್ ಗೆ ಬಂಧನ ಭೀತಿ; ನಮ್ಮ ಶಾಸಕರನ್ನು ಕಾಪಾಡಿದ್ದೇ ನನಗೆ ಮುಳುವಾಯ್ತು ಎಂದ ಡಿಕೆಶಿ – ಕಹಳೆ ನ್ಯೂಸ್
ಬೆಂಗಳೂರು : ದೆಹಲಿಯಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಸಿಕ್ಕ ಅಕ್ರಮ ಹಣದ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ರದ್ದುಗೊಳಿಸುವಂತೆ ಡಿಕೆಶಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನಿನ್ನೆ ಹೈಕೋರ್ಟ್ ರದ್ದುಗೊಳಿಸಿತ್ತು. ಇಂದು ಡಿಕೆಶಿ ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ. ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆತಂದು ರಕ್ಷಿಸಿದ್ದೇ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಮುಳುವಾಯಿತಾ? ಅನ್ನೋದು ಸದ್ಯ ಚರ್ಚೆ ಆಗುತ್ತಿರುವ ವಿಷಯ ಈ ಬಗ್ಗೆ ಖುದ್ದು ಡಿಕೆಶಿ ಹೇಳಿಕೆ ನೀಡಿದ್ದಾರೆ.
ನಾನೇನೂ ತಪ್ಪು ಮಾಡಿಲ್ಲ, ರೇಪ್ ಮಾಡಿಲ್ಲ, ದುಡ್ಡೂ ಹೊಡೆದಿಲ್ಲ. ನನ್ನ ವಿರುದ್ಧ ಯಾವ ಆರೋಪವನ್ನೂ ಸಾಬೀತುಪಡಿಸಲು ಸಾಧ್ಯವಿಲ್ಲ. ನಾನು ಟೆನ್ಷನ್ ಮಾಡಿಕೊಂಡಿಲ್ಲ. ಸುಮ್ಮನೆ ಬೇರೆಯವರೂ ಟೆನ್ಷನ್ ಮಾಡಿಕೊಳ್ಳಬೇಡಿ. ಇದು ರಾಜಕೀಯ ಆಟವಷ್ಟೆ. ನಮ್ಮ ಶಾಸಕರನ್ನು ರಕ್ಷಿಸಿದ್ದಕ್ಕೆ ನನ್ನ ಮೇಲೆ ಪೊಲಿಟಿಕಲ್ ಕೇಸ್ ಹಾಕಿದ್ದಾರೆ. ರಾಜಕೀಯದಲ್ಲಿ ಇದೆಲ್ಲ ಮಾಮೂಲು. ನಾನಿದನ್ನು ಎದುರಿಸುತ್ತೇನೆ. ಯಾರಿಗಾದರೂ ಒಳ್ಳೆಯದು ಮಾಡಿದರೆ ಇಂಥ ಕಷ್ಟಗಳನ್ನೆಲ್ಲ ಎದುರಿಸಬೇಕಾಗುತ್ತದೆ. ಆ ಬಗ್ಗೆ ವಿವರವಾಗಿ ಮಾತನಾಡಲಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.
ನಾನು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‍ನಲ್ಲಿ ವಜಾ ಆಗಿದೆ. ನಿನ್ನೆ ರಾತ್ರಿ ಸಮನ್ಸ್ ಜಾರಿಗೊಳಿಸಿರುವುದರಿಂದ ನಮ್ಮ ವಕೀಲರ ಬಳಿ ಮಾತನಾಡಲು ಸಾಧ್ಯವಾಗಿಲ್ಲ. ಅವರ ಬಳಿ ಈಗ ಮಾತುಕತೆ ನಡೆಸಿ ದೆಹಲಿಗೆ ತೆರಳುತ್ತೇನೆ. ಮಧ್ಯಾಹ್ನ 1 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಬೇಕೆಂದು ಇಡಿ ಅಧಿಕಾರಿಗಳು ಸೂಚಿಸಿದ್ದರು. ಹಾಗಾಗಿ ಸುದ್ದಿಗೋಷ್ಠಿ ನಡೆಸಿ ದೆಹಲಿಗೆ ತೆರಳಲಿದ್ದಾರೆ ಡಿಕೆಶಿ. ಅದಕ್ಕೂ ಮುನ್ನ ವಕೀಲರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ.
ಗುಜರಾತ್ ಶಾಸಕರನ್ನು ಈಗಲ್ಟನ್ ರೆಸಾರ್ಟ್‍ಗೆ ಕರೆತಂದು ಆಪರೇಷನ್ ಕಮಲದಿಂದ ರಕ್ಷಿಸಿದ್ದಕ್ಕೆ ಬಿಜೆಪಿ ನನ್ನ ಮೇಲೆ ರಾಜಕೀಯ ಪ್ರೇರಿತ ದಾಳಿ ನಡೆಸಿದೆ ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.
ದೆಹಲಿಯಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಸಿಕ್ಕ ಅಕ್ರಮ ಹಣದ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ರದ್ದುಗೊಳಿಸುವಂತೆ ಡಿಕೆಶಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನಿನ್ನೆ ಹೈಕೋರ್ಟ್ ರದ್ದುಗೊಳಿಸಿತ್ತು. ನಿನ್ನೆ ರಾತ್ರಿ ಮತ್ತೆ ಡಿಕೆಶಿ ಮನೆಗೆ ತೆರಳಿರುವ ಇಡಿ ಅಧಿಕಾರಿಗಳು ಇಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು.
ಇಡಿ ವಿಚಾರಣೆಗೆ ಹಾಜರಾದ್ರೆ ಏನು ಮಾಡಬೇಕು? ಬಚಾವಾಗುವುದು ಹೇಗೆ? ಎಂಬುದರ ಬಗ್ಗೆ ಡಿಕೆಶಿ ಚಿಂತನೆ ನಡೆಸಿದ್ದಾರೆ. ಅಧಿಕಾರಿಗಳ ಪ್ರಶ್ನೆಗಳಿಗೆ ಹೇಗೆ ಉತ್ತರ ಕೊಡಬೇಕು? ದಾಳಿ ವೇಳೆ ಪತ್ತೆಯಾದ ಹಣ ಸೂಕ್ತ ದಾಖಲೆ ನೀಡಬೇಕು? ಸೂಕ್ತ ದಾಖಲಾತಿ ನೀಡದೆ ಹೋದರೆ ಮುಂದೇನು? ದಾಖಲಾತಿ ನೀಡಲು ಕಾಲಾವಕಾಶ ನೀಡಬಹುದು? ಎಂಬ ಯೋಚನೆ ಶುರುವಾಗಿದ್ದು, ಇಂದು ವಿಚಾರಣೆಗೆ ಡಿಕೆಶಿ ಜೊತೆಗೆ ವಕೀಲರೂ ತೆರಳುವ ಸಾಧ್ಯತೆಯಿದೆ. ಅವಶ್ಯಕತೆ ಬಿದ್ದರೆ ಡಿಕೆಶಿಯನ್ನ ಇಡಿ ವಶಕ್ಕೆ ಪಡೆಯಬಹುದು. ಪ್ರಕರಣ ಸಂಬಂಧ ಸೂಕ್ತ ಸಾಕ್ಷಿ ಇದ್ದರೆ ಬಂಧನ ಸಾಧ್ಯತೆಯೂ ಇದೆ.