Recent Posts

Sunday, January 19, 2025
ಸಿನಿಮಾ

ಬಾಲಿವುಡ್ ಬಾದ್ ಶಾ ‘ಝೀರೋ’ ಬಳಿಕ ಮತ್ತೆ ತೆರೆಮೇಲೆ – ಹೀರೋ ಪಟ್ಟದಿಂದ ಕಣ್ಮರೆಯಾದ್ರಾ ಶಾರುಖ್ ಖಾನ್..? – ಕಹಳೆ ನ್ಯೂಸ್

ಮುಂಬೈ : ಕಳೆದ ವರ್ಷ ತೆರೆಕಂಡಿದ್ದ ಶಾರುಖ್ ಖಾನ್ ಅಭಿನಯದ ‘ಝೀರೋ’ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಮಕಾಡೆ ಮಲಗಿತ್ತು. ಶಾರುಖ್ ಹೀರೋಯಿಸಂ ಬಿಟ್ಟು ಭಿನ್ನ ಅವತಾರ ತಾಳಿದ್ದು ಪ್ರೇಕ್ಷಕರಿಗೆ ಇಷ್ಟವಾಗಲೇ ಇಲ್ಲ. ಈ ಚಿತ್ರ ಫ್ಲಾಪ್ ಆದ ನಂತರ ಸಿನಿಮಾ ನಿರ್ಮಾಣದತ್ತ ಶಾರುಖ್ ಗಮನ ಹರಿಸುತ್ತಿದ್ದಾರೆ. ಅಲ್ಲದೆ, ಹೆಚ್ಚಿನ ಸಮಯವನ್ನು ಕುಟುಂಬದ ಜೊತೆಯೇ ಕಳೆಯುತ್ತಿದ್ದಾರೆ ಎಂದೆಲ್ಲಾ ಸುದ್ದಿ ಹಬ್ಬಿತ್ತು. ಆದರೆ ಅಚ್ಚರಿ ಎಂದರೆ 2019ರಲ್ಲೇ ಅವರ ಅಭಿನಯದ ಸಿನಿಮಾ ತೆರೆಗೆ ಬರುತ್ತಿದೆ. ಆದರೆ, ಅವರು ಈ ಸಿನಿಮಾದಲ್ಲಿ ಹೀರೋ ಅಲ್ಲ!

ಜಾಹೀರಾತು
ಜಾಹೀರಾತು
ಜಾಹೀರಾತು

ರಣಬೀರ್ ಕಪೂರ್ ಹಾಗು ಆಲಿಯಾ ಭಟ್ ಅಭಿನಯದ ‘ಬ್ರಹ್ಮಾಸ್ತ್ರ’ ಸಿನಿಮಾ ಈ ವರ್ಷ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಶಾರುಖ್ ಅತಿಥಿ ಪಾತ್ರ ಮಾಡಲಿದ್ದಾರೆ. ಚಿತ್ರದ ನಿರ್ದೇಶಕ ಅಯಾನ್ ಮುಖರ್ಜಿ ಈ ವಿಚಾರವಾಗಿ ಶಾರುಖ್ ಜೊತೆ ಮಾತುಕತೆ ನಡೆಸಿದ್ದಾರಂತೆ. ಕಿಂಗ್ ಖಾನ್ ಕೂಡ ಪಾತ್ರವನ್ನು ಮೆಚ್ಚಿಕೊಂಡಿದ್ದು, ನಟಿಸಲು ಒಪ್ಪಿದ್ದಾರಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಲಗಳ ಪ್ರಕಾರ ಇಡೀ ಸಿನಿಮಾದಲ್ಲಿ ಶಾರುಖ್ ನಿರ್ವಹಿಸಲಿರುವ ಅತಿಥಿ ಪಾತ್ರ ತುಂಬಾನೇ ಪ್ರಮುಖ ಪಾತ್ರವಹಿಸಲಿದೆಯಂತೆ. ಈ ವಿಚಾರಕ್ಕಾಗಿ ಮಾತ್ರ ಶಾರುಖ್ ಸಿನಿಮಾ ಒಪ್ಪಿಕೊಂಡಿಲ್ಲ. ಈ ಮೊದಲು ಆಲಿಯಾ ಭಟ್ ಜೊತೆ ಶಾರುಖ್ ‘ಡಿಯರ್ ಜಿಂದಗಿ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ರಣಬೀರ್ ನಟನೆಯ ‘ಯೇ ದಿಲ್ ಹೇ ಮುಷ್ಕಿಲ್’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈಗ ಇಬ್ಬರ ಜೊತೆ ಅವರು ಒಂದೇ ಸಿನಿಮಾದಲ್ಲಿ ಬಣ್ಣ ಹಚ್ಚುವ ಅವಕಾಶ ಸಿಕ್ಕಿದೆ. ಹೀಗಾಗಿ ಶಾರುಖ್ ಅತಿಥಿ ಪಾತ್ರ ಮಾಡಲು ಒಪ್ಪಿದ್ದಾರಂತೆ.

2013ರಲ್ಲಿ ತೆರೆಕಂಡ ‘ಚೆನ್ನೈ ಎಕ್ಸ್ ಪ್ರೆಸ್’ ಚಿತ್ರವೇ ಕೊನೆ. ನಂತರ ಶಾರುಖ್ ತಮ್ಮ ಮೂಲ ಚಾರ್ಮ್ ಕಳೆದುಕೊಳ್ಳಲು ಆರಂಭಿಸಿದ್ದರು. ಸೋಲು ಅವರ ಬೆನ್ನು ಬಿದ್ದಿತ್ತು. ‘ಹ್ಯಾಪಿ ನ್ಯೂ ಇಯರ್’ ಚಿತ್ರ ಕಮಾಯಿ ಮಾಡಿತ್ತಾದರೂ, ವಿಮರ್ಷೆಯಲ್ಲಿ ಸೋತಿತ್ತು. ಇನ್ನು, ‘ಡಿಯರ್ ಜಿಂದಗಿ’ ಚಿತ್ರವನ್ನು ಜನ ಮೆಚ್ಚಿಕೊಂಡರಾದರೂ ಅದರಲ್ಲಿ ಹೈಲೈಟ್ ಆಗಿದ್ದು, ನಟಿ ಆಲಿಯಾ ಭಟ್. ಇನ್ನು, ಶಾರುಖ್ ಅಭಿನಯದ ‘ಫ್ಯಾನ್’ ಚಿತ್ರವಂತೂ ಹೇಳ ಹೆಸರಿಲ್ಲದೆ ನೆಲಕಚ್ಚಿತ್ತು. ‘ರಾಯೀಸ್’, ‘ಜಬ್ ಹ್ಯಾರಿ ಮೆಟ್ ಸೇಜಲ್’ ಸಾಮಾನ್ಯ ಸಿನಿಮಾ ಎನ್ನುವ ಹಣೆ ಪಟ್ಟಿ ಹೊತ್ತುಕೊಂಡಿತು. ‘ಝೀರೋ’ ಚಿತ್ರದ ಮೂಲಕ ಮತ್ತೆ ಸೋಲಾಗಿದೆ.

ಈಗ ಒಂದು ವರ್ಷದ ಬಳಿಕ ಅವರು ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಅದು ಅತಿಥಿಯಾಗಿ ಎನ್ನುವುದು ಅವರ ಅಭಿಮಾನಿಗಳಿಗೆ ಬೇಸರಮೂಡಿಸಿದೆ. ಅಲ್ಲದೇ ಅನೇಕರು ಶಾರುಖ್ ಹೀರೋ ಪಟ್ಟ ಕಳೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.