Sunday, January 19, 2025
ಅಂಕಣಸಿನಿಮಾ

ರೂಪೇಶ್ ಶೆಟ್ರ ” ಗಿರಿಗಿಟ್ “ಗೆ ಒಂದು ಕೋಟಿ – ಶ್ಯಾಮ ಸುದರ್ಶನ ಹೊಸಮೂಲೆ ( ಸಂಪಾದಕೀಯ ) – ಕಹಳೆ ನ್ಯೂಸ್

ತುಳುಚಲನಚಿತ್ರ ರಂಗ ಬಡವಾಗಿದೆಯೇ..? ಎಂಬ ಪ್ರಶ್ನೆಯನ್ನು ಪ್ರಶ್ನಿಸುತ್ತಿದೆ ತುಳು ಚಲನಚಿತ್ರಗಳ ನಾಗಾಲೋಟ ಹೌದು, ಹತ್ತು ಹಲವಾರು ಚಲನಚಿತ್ರಗಳು ತುಳುನಾಡಿನಲ್ಲಿ ಸದ್ದು ಮಾಡಿದೆ, ದೇಶ ವಿದೇಶದಲ್ಲೂ ಬಿಡುಗಡೆಯಾಗಿದೆ. ಆದರೆ, ಯಾವತ್ತೂ ಒಂದು ಪರೀದಿಯನ್ನು ಮೀರಿ ಮುಂದೆ ಹೋಗಿರಲಿಲ್ಲ ಎಂಬುದು ಇತಿಹಾಸ.

ಇಂದು ಈ ಇತಿಹಾಸವನ್ನು ಆಳಿಸಿ, ತುಳುಚಿತ್ರರಂಗದ ಬಾಕ್ಸ್ ಆಫೀಸ್‌ನ್ನು ಕೊಳ್ಳೆಹೊಡೆದು, ತೆರೆಕಂಡ ಒಂದೇವಾರದಲ್ಲಿ ತುಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲೂ ” ಹೌಸ್ ಫುಲ್ ಶೋ “….! ವಿದೇಶದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೌದು 100% ನೀವು ಅಂದುಕೊಂಡದ್ದು ಸತ್ಯ ನಾನು ಮಾತನಾಡುತ್ತಿರುವುದು ಗಿರಿಗಿಟ್ ಬಗ್ಗೆಯೇ..!

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗಿರಿಗಿಟ್ – ತುಳು ಚಲನಚಿತ್ರ ಎಸ್, ಇದು ತುಳು ಚಲನಚಿತ್ರವೇ, ಆದ್ರೆ ಇಂದು ತುಳು ಚಿತ್ರರಂಗದ ಬಾದ್ ಶಾ..! ಗಿರಿಗಿಟ್ ತಿರುಗುತ್ತಿರುವ ರಬಸ್ಸಕ್ಕೆ ಕನ್ನಡ, ತಮಿಳು, ತೆಲುಗು, ಮಳಿಯಾಳಂ, ಚಿತ್ರರಂಗ ಕರಾವಳಿಯತ್ತ ಮುಖಮಾಡಿ ನೋಡುವಂತೆ ಮಾಡಿ ಹೊಸ ಮನ್ವಂತರ ಸೃಷ್ಟಿಸಿದ್ದು ಮಾತ್ರ ಸುಳ್ಳಲ್ಲ.

ಅದೇ ರೂಪೇಶ್ ಶೆಟ್ಟಿ, ಅದೇ ಪಡೀಲ್, ಅದೇ ವಾಮಂಜೂರು ಮತ್ತದೇ ಬೋಳಾರ್ ಆದ್ರೆ ಕಥೆ – ಹಾಸ್ಯ – ಸಂಗೀತ… ವಾವ್..! ಜನರ ಮನಸೂರೆಗೊಳಿಸಿದೆ. ಎಸ್, ಇದೇ ಕಂಡ್ರಿ ನಮ್ಮ ತುಳುವರು ತಾಕತ್ತು. ತುಳುಚಿತ್ರ ಅಂದ್ರೆ ಮೂಗು ಮುರಿಯುತ್ತಿದ್ದ ಮಂದಿ ಇಂದು ಚಿತ್ರಮಂದಿರಗಳತ್ತ ಮುಖಮಾಡಿದ್ದಾರೆ. ತುಳುಚಿತ್ರ ಎಂದರೆ ತೆರೆಕಂಡು ಒಂದೆರಡು ದಿನಕ್ಕೆ ಬಿಕೋ ಎನ್ನುತ್ತಿದ್ದ ಟಾಕಿಸ್ ಗಳ ಮುಂದೆ ಗಿರಿಗಿಟ್ ತೆರೆಕಂಡು ಒಂದು ವಾರ ಕಳೆದರೂ ಪ್ರತಿ ಶೋನಲ್ಲೂ ” ಹೌಸ್ ಫುಲ್ ” ಎಂಬ ಬೋರ್ಡ್ ನೇತಾಡುತ್ತಿದೆ. ಇದಲ್ವೇನ್ರಿ ಹಿಟ್ ಅಂದ್ರೆ. ಶಾಹ್ಬಾಸ್…! ಯೂ ಹ್ಯಾವ್ ಡನ್ ಇಟ್ ರೂಪೇಶ್ …. ಯೂ ಹ್ಯಾವ್ ಡ್ ಇಟ್..!

ವಿಶೇಷತೆ ಏನು ಗೊತ್ತಾ..? ತೆರೆಕಂಡು ಒಂದೇ ವಾರಕ್ಕೆ ಒಂದು ಕೋಟಿಗೂ ಅಧಿಕ ಕಲೆಕ್ಷನ್, ಚಿತ್ರಮಂದಿರಗಳಲ್ಲಿ ತುಂಬಿತುಳುಕುವ ಜನ, ವ್ಯಾಪಕ ಶ್ಲಾಘನೆ. ಎಸ್. ಇದೇ ಕಂಡ್ರಿ ಇವತ್ತು ಎಲ್ಲರ ತಲೆಕೆಡಿಸಿರೋದು, ಅನೇಕ ನಿದ್ದೆಗೆಡಿಸಿರೋದು, ಹಿಟ್ ಅಂದ್ರೆ ಇದು ಅಲ್ವಾ..? ಗೆಲುವು ಅಂದ್ರೆ ಮತ್ತೇನು..? ರೂಪೇಶ್.. ಯು ಆರ್ ರಾಂಕಿಗ್ ಬಾಸ್..!

ಎಸ್, ಸ್ನೇಹಿತರೆ ನಾನಂತು ಗಿರಿಗಿಟ್ ನೋಡಿದೆ ಮತ್ತೆ ನೀವು…? ಇಷ್ಟೆಲ್ಲಾ ಹೇಳಿದ್ ನಂತ್ರಾನೂ ನೀವು ನೋಡಿಲ್ಲಾ ಅಂದ್ರೆ… ನಾನೇನು ಮಾಡಕಾಗಲ್ಲ ಅದು ನಿಮ್ಮ ಹಣೆಬರಹ.. ! ಅಯೋ…… ದೇವಾ…….!

– ಶ್ಯಾಮ ಸುದರ್ಶನ ಹೊಸಮೂಲೆ ( ಸಂಪಾದಕೀಯ ) – ಕಹಳೆ ನ್ಯೂಸ್