Recent Posts

Sunday, January 19, 2025
ಸುದ್ದಿ

” ಸ್ವಾಸ್ಥ್ಯ ನೇಚರ್ ಕ್ಯೂರ್ ” ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಪುತ್ತೂರಿನಲ್ಲಿ ಶುಭಾರಂಭ | ವೈದ್ಯರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು – ಡಾ. ಕಮಲಾ ಪ್ರಭಾಕರ್ ಭಟ್ ಕಲ್ಲಡ್ಕ

 

ಪುತ್ತೂರು : ಪುತ್ತೂರಿನ ಪ್ರಪ್ರಥಮ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ ಸ್ವಾಸ್ಥ್ಯ ನೇಚರ್ ಕ್ಯೂರನ್ನು ‘ ಹಿರಿಯ ವೈದ್ಯರಾದ ಡಾ. ಕೆ.ಜಿ. ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಮಾತನಾಡಿದ ಅವರು ಇವತ್ತಿನ ಔಷಧಿಯ ಪದ್ಧತಿಗೆ ನೇಚುರೋಪತಿ ಅತ್ಯಂತ ಸೂಕ್ತ. ಯಾವುದೇ ವಿಷಪೂರಿತ ಔಷಧಿಗಳಿಲ್ಲದೆ, ಯೋಗ ಮತ್ತು ಪ್ರಕೃತಿ ದತ್ತವಾದ ಚಿಕಿತ್ಸೆಗಳ ಮೂಲಕ ವಿಭಿನ್ನವಾಗಿ ಮತ್ತು ಸಮಾಜಕ್ಕೂ ಪೂರಕವಾಗಿ ಸ್ವಾಸ್ಥ್ಯ ನೇಚರ್ ಕ್ಯೂರ್ ಮುಖಮಾಡಲಿ, ರೋಗಿಗಳ ಕಿಸೆ ನೋಡದೆ, ಅವರಿಗೆ ಕನಿಷ್ಠ ಹಣದಲ್ಲಿ ಗರಿಷ್ಠ ಸೇವೆ ಕೊಡಬೇಕಾದ್ದು ವೈದ್ಯನ ಕರ್ತವ್ಯ, ಈ ನಿಟ್ಟಿನಲ್ಲಿ ಡಾ ಗೌರಿಯವರು ಕಾರ್ಯೋನ್ಮುಖರಾಗಬೇಕು ಎಂದು ಹೇಳಿ ಶುಭಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯ ಪರಂಪರೆಯಲ್ಲಿ ಔಷಧ, ಆಹಾರ, ವಿದ್ಯೆ ಉಚಿತವಾಗಿ ದೊರೆಯುತ್ತಿತ್ತು. ಆದರೆ, ಈಗ ಅವೆಲ್ಲವೂ ಒಂದು ಹಣ ಗಳಿಸುವ ಉದ್ಯಮವಾಗಿದೆ. ಇದು ವಿಷಾದನೀಯ, ಇದಕ್ಕಿಂತ ಭಿನ್ನವಾಗಿ ಸೇವಾದೃಷ್ಟಿಯಿಂದ ಸಮಾಜಕ್ಕೆ ಪ್ರೇರಕವಾಗಿ ಸ್ವಾಸ್ಥ್ಯ ನೇಚರ್ ಕ್ಯೂರ್ ಡಾ. ಗೌರಿ ಶ್ಯಾಮ ಅವರ ಮುಂದಾಳತ್ವದಲ್ಲಿ ನಡೆಯಲಿದೆ ಎಂದು ಡಾ. ಕಮಲಾ ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ಕಾರ್ಯಕ್ರಮದಲ್ಲಿ ಮಹಾವೀರ ಆಸ್ಪತ್ರೆಯ ಮುಖ್ಯಸ್ಥರಾದ ಅಶೋಕ್ ಪಡಿವಾಲ್, ಪ್ರಗತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಗೋಕುಲ್ ನಾಥ್, ಬಜರಂಗದಳ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ, ಡಾ. ಪ್ರಭಾಕರ್ ಉರಿಮಜಲು, ಡಾ. ಪಳ್ಳಾಜೆ ಈಶ್ವರ ಭಟ್, ಡಾ. ರುಕ್ಮಿಣಿ ಪಳ್ಳಾಜೆ, ಹಿರಣ್ಯ ಗಣಪತಿ ಭಟ್, ಮಹಾದೇಸ ಶಾಸ್ತ್ರಿ ಮಣಿಲ, ರವಿಶಂಕರ್ ಭಟ್ ಉಪ್ಪಂಗಳ, ಶಿವಶಂಕರ ಭಟ್ ಬೊನಂತ್ತಾಯ, ವೆಂಕಟರಮಣ ಭಟ್ ಪೆಲಪ್ಪಾರು, ವಿದ್ಯಾ ಆರ್. ಗೌರಿ, ಕವಯತ್ರಿ ಶಾಂತ ಕುಂಟಿನಿ, ಸಾಹಿತಿ ಕೆ. ಗೋಪಾಲಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.

Leave a Response