ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ 38ನೇ ಗಣೇಶೋತ್ಸವು ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಿತು. ಸೋಮವಾರ ಅಪರಾಹ್ನದಿಂದ ಸಂಜೆ ತನಕ ವಿವೇಕಾನಂದ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರನ್ನು ರಂಜಿಸಿತು.
ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿ ಕೀರ್ತಿ ಕುರುವ ‘ಗಜಾವದನ ನಾ ಬೇಡುವೆ’ ಎಂಬ ಹಾಡಿಗೆ ಗಜಮುಖನನ್ನು ಭಕ್ತಿಯಿಂದ ಸ್ತುತಿಸುವ ಮೂಲಕ ಹಾಡಿಗೆ ಧ್ವನಿ ಸೇರಿದರು. ಆ ಬಳಿಕ ವಿದ್ಯಾರ್ಥಿಗಳು ‘ಗಣಾನಾಯಕಯಾ ಗಣದೈವತಾಯ ಗಣಾಧ್ಯಕ್ಷಾಯ ಧೀಮಹಿ’ ಎಂಬ ಹಾಡಿಗೆ ನೃತ್ಯ ಮಾಡುವುದರ ಮೂಲಕ ಗಣೇಶನ ವೈಭವವನ್ನು ಕೊಂಡಾಡಿದರು. ‘ಜನಿಸಿ ಬಾರೋ ಓ ಮುರಾರಿ’ ಎಂಬ ಹಾಡಿಗೆ ಮಾನಸ ಸ್ವರ ಸೇರಿಸಿದರು. ‘ಗಣಾನಾಯಕಯಾ ಗಣದೈವತಾಯ ಗಣಾದಕ್ಷಾಯ ಧೀಮಯೀ’ ಮತ್ತು ‘ಶ್ರೀ ಗಣೇಶ ದೇವಾ ಶ್ರೀ ಗಣೇಶ ದೇವಾ’ ಎಂಬ ಹಾಡಿಗೆ ಪದವಿ ವಿದ್ಯಾರ್ಥಿಗಳಾದ ದೀಪಿಕಾ ಶೆಟ್ಟಿ ಮತ್ತು ವರ್ಷ ಶೆಟ್ಟಿ ಹೆಜ್ಜೆ ಹಾಕುವುದರ ಮೂಲಕ ನೋಡುಗರ ಕಣ್ಮನ ಸೆಳೆದರು.
ವಿವೇಕಾನಂದ ಕಾಲೇಜಿನ ಯಶಸ್ಸು ವಿದ್ಯಾರ್ಥಿಗಳು ಗಣೇಶ ಚತುರ್ಥಿಯ ಪುರಾಣದ ಹಿನ್ನೆಲೆಯನ್ನು ತಿಳಿಸುವುದರ ಜೊತೆಗೆ ಗಣಪನ ಹಾಡಿಗೆ ಹೆಜ್ಜೆ ಬೆರೆಸಿದರು. ಭಾರತಾಂಬೆಯ ಸೊಬಗನ್ನು ಮತ್ತು ಆಕೆಯ ವೈಭವವನ್ನು ತಮ್ಮ ಕಂಠ ಸಿರಿಯನ್ನು ವಿದ್ಯಾರ್ಥಿನಿ ಕೀರ್ತಿ ಕುರುವ ಹಾಡಿಹೊಗಳಿದರು.
ವಿವೇಕಾನಂದ ಪಾಲಿಟೆಕ್ನಿಕ್ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ವಕ್ರತುಂಡನ ಹಾಡಿಗೆ ಭರತನಾಟ್ಯ ಮಾಡಿದರು. ವಿವೇಕಾನಂದ ಕಾಲೇಜಿನ ಪಾಲಿಟೆಕ್ನಿಕ್ ತೃತೀಯ ವರ್ಷದ ವಿದ್ಯಾರ್ಥಿಗಳು ಶ್ರೀರಾಮ ಹಾಡಿಗೆ ನೃತ್ಯ ಮಾಡಿದರು. ‘ಭರತ ವೇದ ಮೊಗ, ನಿನಾದ ನಾಟ್ಯ ಮುಖ’ ಎಂಬ ಹಾಡಿಗೆ ಕಣ್ಣಿಗೆ ಕಟ್ಟುವಂತೆ ಹೆಜ್ಜೆ ಹಾಕಿದರು. ಇನ್ನು ‘ಶ್ರೀ ಗಣೇಶ ದೇವಾ ಶ್ರೀ ಗಣೇಶ ದೇವಾ’ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಪೇಕ್ಷಕರ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ವಿಜ್ಞಾನ ವಿಭಾಗದ ಸಿಂಚನ ಲಕ್ಷ್ಮೀ ವಿಘ್ನವಿನಾಶಕನ ಸ್ತುತಿಯನ್ನು ಹಾಡಿದರು. ಕಾಲೇಜಿನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ‘ರಿದ್ಧಿ ಸಿದ್ಧಿ ವೃದ್ಧಿ ಹೋತಿ ಆ ತೆರೆ ಹೇ ಆನೆಸೇ’ ಎಂಬ ಹಾಡಿಗೆ ನೃತ್ಯ ಮಾಡುವುದರ ಮೂಲಕ ವೇದಿಕೆಯನ್ನು ಧೂಳೆಬ್ಬಿಸಿ, ಸಿಳ್ಳೆ ಗಿಟ್ಟಿಸಿಕೊಂಡರು. ರಾಧಾ ಕೃಷ್ಣನ ಪ್ರೀತಿಯನ್ನು ನೆನೆಯುವ ‘ನೀ ಇರದೇ ಬಾಳೊಂದು ಬಾಳೇ ಕೃಷ್ಣ’ ಹಾಡಿಗೆ ಬಲು ಸುಂದರವಾಗಿ ಧ್ವನಿ ಬೆರೆಸಿದರು. ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾಥಿಗಳಾದ ‘ಮೆ ತೆನು ಸಮಜಾವ’ ನೃತ್ಯಕ್ಕೆ ಸಂದರವಾಗಿ ಹೆಜ್ಜೆ ಹಾಕಿದರು.
ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಗಣಪನನ್ನು ಸ್ತುತಿಸಿದರು. ತದನಂತರ ವಿದ್ಯಾರ್ಥಿ ಧನ್ಯಶ್ರೀ ಭರತನಾಟ್ಯ ನೃತ್ಯ ಮಾಡುವುದರ ಮೂಲಕ ಜನರ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು. ಕೊನೆಯದಾಗಿ ಓಂಕಾರ ನಾದಪ್ರಿಯ ‘ಹೇ ಗಣಪ’ ಎಂಬ ಹಾಡಿಗೆ ವಿದ್ಯಾರ್ಥಿ ಸಂಹಿತ ಧ್ವನಿ ಗೂಡಿಸಿದರು.
ಕಾರ್ಯಕ್ರಮದ ಕೊನೆಯ ಭಾಗವಾಗಿ ವಿವೇಕಾನಂದ ಕಾನೂನು ಮಹಾವಿದ್ಯಾಲಯ ವಿದ್ಯಾರ್ಥಿಗಳಿಂದ ಭಜನೆ ಮತ್ತು ವಿವೇಕಾನಂದ ಕಾಲೇಜಿನ ವಿದ್ಯಾಥಿಗಳು 6 ಭಜನೆ ಹಾಡುವುದರ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಿದರು. ಮೊದಲ ದಿನ ವಿಶೇಷವಾಗಿ ಗಣಪನಿಗೆ ರಂಗಪೂಜೆ ನಡೆಯಿತು.