Recent Posts

Monday, April 14, 2025
ರಾಜಕೀಯ

ಸೆ. 5ರವರೆಗೆ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಸಿಬಿಐ ಕಸ್ಟಡಿ ಅವಧಿ ವಿಸ್ತರಣೆ; ಸುಪ್ರೀಂ ಕೋರ್ಟ್ – ಕಹಳೆ ನ್ಯೂಸ್

ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಹಗರಣದ ಆರೋಪಿ ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಅವರನ್ನು ಸೆ. 5ರವರೆಗೆ ಸಿಬಿಐ ಕಸ್ಟಡಿ ವಿಸ್ತರಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಮಧ್ಯಂತರ ಜಾಮೀನು ಅರ್ಜಿಯ ವಿಚಾರಣಾ ನ್ಯಾಯಾಲಯದ ಮುಂದೆ ಒತ್ತಾಯಿಸದಿರಲು ಚಿದಂಬರಂ ಪರ ವಕೀಲರು ಒಪ್ಪಿದ್ದಾರೆ. ಚಿದಂಬರಂ ಅವರ 15 ದಿನಗಳ ಕಸ್ಟಡಿ ಸೆಪ್ಟೆಂಬರ್ 5ಕ್ಕೆ ಕೊನೆಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಬಿಐ ವಶಕ್ಕೆ ಪಡೆದಿರುವುದನ್ನು ಪ್ರಶ್ನಿಸಿ ಚಿದಂಬರಂ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಸಿದ್ದು ಸೆಪ್ಟೆಂಬರ್ 5ರವರೆಗೆ ಚಿದಂಬರಂಗೆ ಸಿಬಿಐ ಕಸ್ಟಡಿ ಅವಧಿ ವಿಸ್ತರಿಸಿದೆ. ಸೆಪ್ಟೆಂಬರ್ 5ರಂದು ಕೋರ್ಟ್ ಜಾಮೀನು ನೀಡಿದರೆ ನಂತರ ಇಡಿ ತನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ