Saturday, November 23, 2024
ಸುದ್ದಿ

ಡಿಕೆಶಿಗೆ ಜಾಮೀನು ಸಿಗದಂತೆ ಇ.ಡಿ ಪರ ವಾದ ಮಂಡಿಸಿದ್ದ ವಕೀಲ ಪುತ್ತೂರಿನ ಕೆ.ಎಂ. ನಟರಾಜ್​..! – ಕಹಳೆ ನ್ಯೂಸ್

ಬೆಂಗಳೂರು: ಪ್ರಭಾವಿ ರಾಜಕಾರಣಿ, ಕಾಂಗ್ರೆಸ್​ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಇಂದು ನ್ಯಾಯಾಲಯ ಹತ್ತು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿ, ಆದೇಶ ನೀಡಿದೆ. ಡಿಕೆಶಿ ಅವರಿಗೆ ಜಾಮೀನು ಸಿಗದಂತೆ ಮತ್ತು ಇ.ಡಿ. ಕಸ್ಟಡಿಗೆ ಒಪ್ಪಿಸುವಂತೆ ಪ್ರಬಲವಾಗಿ ವಾದ ಮಂಡಿಸಿದ್ದು, ನಮ್ಮ ರಾಜ್ಯದವರೇ ಆದ ಕೆ.ಎಂ.  ನಟರಾಜ್​.

ಡಿಕೆಶಿ ಪರ ವಕೀಲರಾದ ಅಭಿಷೇಕ್​ ಮನುಸಿಂಘ್ವಿ ಇಂದು ವಾದ ಮಂಡಿಸಿದ್ದರು. ಡಿಕೆಶಿಗೆ ಜಾಮೀನು ಮಂಜೂರು ಮಾಡುವಂತೆ ಪ್ರಬಲವಾಗಿ ವಾದಿಸಿದ್ದರು. ಆದರೆ, ಸಿಂಘ್ವಿ ಅವರ ವಾದಕ್ಕೆ ಪ್ರತಿವಾದ ನಟರಾಜ್​ ಪ್ರತಿವಾದ ಮಂಡಿಸಿ ಸೈ ಎನಿಸಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಯಶಸ್ವಿಯೂ ಆಗಿದ್ದಾರೆ. ಏಕೆಂದರೆ ಡಿಕೆಶಿ ಅವರನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯ 10 ದಿನಗಳ ಕಾಲ ಇ.ಡಿ. ವಶಕ್ಕೆ ಒಪ್ಪಿಸಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

10 ದಿನ ಇ.ಡಿ. ವಶಕ್ಕೆ ಒಪ್ಪಿಸಿದ ನ್ಯಾಯಾಲಯ ಸರ್ಕಾರದ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಆಗಿ ನೇಮಕವಾಗಿರುವ ವಕೀಲ ಕೆ.ಎಂ. ನಟರಾಜ್​ ಅವರು ಪುತ್ತೂರಿನವರು. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ವಿಶೇಷ ಅಭಿಯೋಜಕರಾಗಿದ್ದರು. ನಟರಾಜ್ ಸಮರ್ಥ ವಾದವನ್ನು ಗಮನಿಸಿದ್ದ ಮೋದಿ ಸರ್ಕಾರ ಅಡಿಷನಲ್ ಸಾಲಿಸಿಟರ್ ಜನರಲ್ ದಕ್ಷಿಣ ಭಾರತಕ್ಕೆ ನೇಮಿಸಿತ್ತು. ನಂತರ ಇದೀಗ ಇಡಿ, ಐಟಿ, ಸಿಬಿಐ ಪ್ರಕರಣಗಳಿಗಾಗೆ ಅಡಿಷನಲ್ ಸಾಲಿಸಿಟರ್ ಜನರಲ್ ಸುಪ್ರೀಂಕೋರ್ಟ್ ಆಗಿ ನೇಮಕ ಮಾಡಲಾಗಿದೆ. ಇಡಿ, ಐಟಿ, ಸಿಬಿಐ ಕೇಸುಗಳ ವಾದ ಮಂಡನೆಯಲ್ಲಿ ನಟರಾಜ್ ಪ್ರಬಲ ವಕೀಲರು ಎನಿಸಿಕೊಂಡಿದ್ದಾರೆ. ಇಂದೂ ಕೂಡ ಡಿಕೆಶಿ ಪರ ವಕೀಲರಿಗೆ ಎದುರಾಗಿ ಸಮರ್ಥವಾಗಿ ವಾದ ಮಂಡಿಸಿ ಸೈ ಎನಿಸಿಕೊಂಡಿದ್ದಾರೆ.

ಕೆ.ಎಂ ನಟರಾಜ್​ರ ಸಾಧನೆಯ ಹಾದಿ..!

ಕೆ.ಎಂ. ನಟರಾಜ್

2008ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಚ್ಛ ನ್ಯಾಯಾಲಯದ ವಿಶೇಷ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ ಕೆ.ಎಂ ನಟರಾಜ್, ದತ್ತ ಪೀಠ, ಚರ್ಚ್​ಗಳ ಮೇಲಿನ ದಾಳಿ ಸೇರಿದಂತೆ ಹೈ ಟೆನ್ಷನ್​ ಪ್ರಕರಣಗಳಲ್ಲಿ ಸರ್ಕಾರದ ಪರ ವಾದ ಮಂಡಿಸಿದ್ರು.

ಬಳಿಕ 2014 ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಎನ್​ಡಿಎ-1 ರ ಸರ್ಕಾರದ ಅವಧಿಯಲ್ಲಿ ಅಡಿಷನಲ್ ಸಾಲಿಸಿಟರ್​ ಜನರಲ್ ಆಫ್ ಸುಪ್ರೀಕೋರ್ಟ್​ ಫಾರ್ ಸೌತ್​ ಇಂಡಿಯಾ ಹುದ್ದೆಯನ್ನು ಅಲಂಕರಿಸಿದ್ರು. ಇದರಲ್ಲಿ ಪ್ರಮುಖವಾಗಿ ದಕ್ಷಿಣ ಭಾರತದ 6 ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಪುದುಚೇರಿ ಹಾಗೂ ಕೇರಳ ರಾಜ್ಯಗಳ ಪ್ರಕರಣಗಳಲ್ಲಿ ಎನ್​ಡಿಎ-1 ಸರ್ಕಾರದ ಪರ ನಟರಾಜ್ ವಾದ ಮಂಡಿಸುತ್ತಿದ್ರು.

ಇದರ ಮುಂದುವರೆದ ಭಾಗವಾಗಿ ಕೇರಳದಲ್ಲಿ ಅಧಿಕಾರದಲ್ಲಿದ್ದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಭ್ರಷ್ಟಚಾರ ಪ್ರಕರಣದಲ್ಲಿ ಸಿಲುಕಿದಾಗ, ಸಿಬಿಐ ಮತ್ತು ಇಡಿ ಎರಡು ಇಲಾಖೆಗಳ ಪರ ಕೆ.ಎಂ.ನಟರಾಜ್ ವಾದ ಮಂಡಿಸಿದ್ರು.

ಕೇರಳ ಸರ್ಕಾರದ ವಿರುದ್ಧ ಸಿಬಿಐ ಮತ್ತು ಇಡಿ ಇಲಾಖೆಯ ಪರ ವಾದ ಮಂಡಿಸಿದ ಕೆ.ಎಂ.ನಟರಾಜ್​ರ ಕಾರ್ಯಕ್ಷಮತೆಯನ್ನು ಕಂಡ ಪ್ರಧಾನಿ ನರೇಂದ್ರ ಮೋದಿ, ನಟರಾಜ್​ರನ್ನು ಎನ್​ಡಿಎ-2 ರ ಅವಧಿಗೆ ಆಡಿಷನಲ್ ಸಾಲಿಸಿಟರ್ ಜನರಲ್ ಆಫ್ ಸುಪ್ರೀಂಕೋರ್ಟ್​ ಫಾರ್​ ಇಂಡಿಯಾ ಹುದ್ದೆ ನೀಡಿತ್ತು.
ಇಷ್ಟು ಮಾತ್ರವಲ್ಲದೇ ಬೇರೆ ಬೇರೆ ಇಲಾಖೆಯ ಪ್ರಕರಣಗಳಲ್ಲಿ ವಾದ ಮಾಡುತ್ತಿದ್ದ ಕೆ.ಎಂ.ನಟರಾಜ್​ರನ್ನು, ಪ್ರಮುಖವಾಗಿ ಐಟಿ, ಇಡಿ ಮತ್ತು ಸಿಬಿಐ ಇಲಾಖೆಗಳ ಪ್ರಕರಣಗಳ ಮೇಲೆ ಹೆಚ್ಚಿನ ಗಮನಹರಿಸುವಂತೆ ಸೂಚಿಸಿ, ಇದರ ಮೇಲೆ ಸಂಪೂರ್ಣ ನಿಗಾ ಇಡುವಂತೆ ಮಾಡಿತ್ತು.

ಹೀಗಾಗಿ ಇಂದು ಕೆ.ಎಂ.ನಟರಾಜ್​, ಮಾಜಿ ಸಚಿವ ಹಾಗೂ ಕಾಂಗ್ರೆಸ್​ ಮುಖಂಡ ಡಿ.ಕೆ.ಶಿವಕುಮಾರ್​ ಅವರ ಅಕ್ರಮ ಹಣ ಸಾಗಾಣಿಕೆ ಪ್ರಕರಣದಲ್ಲಿ ಇಡಿ ಇಲಾಖೆಯ ಪರ ವಾದ ಮಂಡಿಸಿದ್ದಾರೆ. ಕೆ.ಎಂ.ನಟರಾಜ್​ ಮಂಡಿಸಿದ ವಾದದ ಪರಿಣಾಮ ಅಜಯ್​ಕುಮಾರ್​ ಕುಹಾರ್​ ನೇತೃತ್ವದ ಏಕಸದಸ್ಯ ಪೀಠ ಶಿವಕುಮಾರ್​ರನ್ನು 9 ದಿನಗಳ ಕಾಲ ಇಡಿ ಅಧಿಕಾರಿಗಳ ಕಸ್ಟಡಿಗೆ ನೀಡಿ ಆದೇಶಿಸಿದೆ.