Recent Posts

Sunday, January 19, 2025
ಸುದ್ದಿ

ಸಾಲಮೇಳದ ಸಂಗ್ರಾಮ | ಜ.26 ನೇ ತಾರೀಖು ಜನಾರ್ಧನ ಪೂಜಾರಿ ಆತ್ಮಕಥೆ ಬಿಡುಗಡೆ – ಕಹಳೆ ನ್ಯೂಸ್

ಮಂಗಳೂರು :  ಜನವರಿ 26 ನೇ ತಾರೀಖು ಜನಾರ್ದನ ಪೂಜಾರಿ ಆತ್ಮಕಥೆ ಬಿಡುಗಡೆಯಾಗಲಿದೆ.

‘ಸಾಲಮೇಳದ ಸಂಗ್ರಾಮ’ ಆತ್ಮಕಥೆಯ ಹೆಸರು. ರಾತ್ರಿ ಹಗಲೆನ್ನದೆ ಆತ್ಮಕಥೆಯನ್ನು ಬರೆದು ಮುಗಿಸಿದ್ದೇನೆ. ನೆನಪಿಗೆ ಬಂದ ಎಲ್ಲಾ ವಿಷಯಗಳನ್ನು ನಮೂದಿಸಿದ್ದೇನೆ. ಬಾಲ್ಯದ ಕಷ್ಟ,ಜೀವನದ ಸವಾಲು,ವಕೀಲ ವೃತ್ತಿ ಜೀವನ,ಇಂದಿರಾಗಾಂಧಿ ಜೊತೆ ಒಡನಾಟ,ರಾಜಕೀಯ ಜೀವನದ ಬಗ್ಗೆ ಬರೆದಿದ್ದೇನೆ. ರಾಜಕೀಯ ಏರುಪೇರುಗಳನ್ನೂ ಆತ್ಮಕಥೆಯಲ್ಲಿ ಸೇರಿಸಿದ್ದೇನೆ. ಆತ್ಮಕಥೆಯಲ್ಲಿ ಕುದ್ರೋಳಿ ಸೇರಿದಂತೆ ಬೇರೆ ದೇವಸ್ಥಾನದ ಚರಿತ್ರೆಯನ್ನೂ ಬರೆದಿದ್ದೇನೆ. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರಿಂದ ಆತ್ಮಕಥೆ ಬಿಡುಗಡೆಗೊಳಿಸುವ  ಆಸೆ ಇದೆ. ಆದರೆ ಅವರಿಗೆ ಬಿಡುವು ಇಲ್ಲದ ಕಾರಣ ನಾನೇ ನನ್ನ ಆತ್ಮಕಥೆ ಬಿಡುಗಡೆ ಮಾಡುತ್ತೇನೆ ಎಂದು  ಮಂಗಳೂರಿನಲ್ಲಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response