Sunday, November 24, 2024
ಸುದ್ದಿ

ಮಲೆನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಮೈದುಂಬಿ ಹರಿಯುತ್ತಿವೆ ಜೀವ ನದಿಗಳು.. ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ, ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ – ಕಹಳೆ ನ್ಯೂಸ್

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜೊತೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು, ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಕೃಷ್ಣಾ ನದಿಯ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ನದಿಪಾತ್ರದ ಜನರು ಆತಂಕದಲ್ಲಿದ್ದಾರೆ. ರಾಜ್ಯದ ವಿವಿಧ ಜಲಾಶಯಗಳ ನೀರಿನ ಪ್ರಮಾಣ ಹೆಚ್ಚಾಗಿದೆ. ಅವುಗಳ ಇಂದಿನ ನೀರಿನ ಮಟ್ಟ ಇಂತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

ಜಾಹೀರಾತು
ಜಾಹೀರಾತು
ಜಾಹೀರಾತು

ಕಬಿನಿ ಜಲಾಶಯ
ಇಂದಿನ ಒಳಹರಿವು 21.962 ಕ್ಯೂಸೆಕ್
ಇಂದಿನ ಹೊರಹರಿವು 26,650 ಕ್ಯೂಸೆಕ್
ಇಂದಿನ ನೀರಿನ ಮಟ್ಟ 2283.23 ಅಡಿ
ಗರಿಷ್ಠ ನೀರಿನ ಮಟ್ಟ 2284 ಅಡಿ.
ಒಟ್ಟು ನೀರಿನ ಸಂಗ್ರಹ ಸಾರ್ಮಥ್ಯ 19.52 ಟಿಎಂಸಿ
ಇಂದು ಇರುವ ನೀರಿನ ಸಂಗ್ರಹ 19.01 ಟಿಎಂಸಿ

ಕೆ.ಆರ್.ಸಾಗರ
ಇಂದಿನ ನೀರಿನ ಮಟ್ಟ-124.80
ಇಂದಿನ ಒಳಹರಿವು-18018
ಇಂದಿನ ಹೊರಹರಿವು-17809
ಇಂದಿನ ಸಂಗ್ರಹ-49.452

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ- 519.60 ಮೀ
ಇಂದಿನ ಮಟ್ಟ- 519.35 ಮೀ.
ಗರಿಷ್ಠ ಸಾಮರ್ಥ್ಯ- 123.081 ಟಿಎಂಸಿ
ಇಂದಿನ ನೀರು ಸಂಗ್ರಹ- 118.727 ಟಿಎಂಸಿ
ಒಳಹರಿವು- 62751ಕ್ಯೂಸೆಕ್
ಹೊರ ಹರಿವು- 140000 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ 1819 ಅಡಿ.
ಇಂದಿನ ಮಟ್ಟ 1818.80
ಒಳ ಹರಿವು 46,578 ಕ್ಯೂಸೆಕ್
ಹೊರ ಹರಿವು 54,997 ಕ್ಯೂಸೆಕ್

ಭದ್ರಾ ಜಲಾಶಯ
ಗರಿಷ್ಠ ಮಟ್ಟ:186 ಅಡಿ.
ಇಂದಿನ ಮಟ್ಟ:185.80ಅಡಿ.
ಒಳ ಹರಿವು:16,290ಕ್ಯೂಸೆಕ್
ಹೊರ ಹರಿವು:15,989 ಕ್ಯೂಸೆಕ್.

ತುಂಗಾ ಜಲಾಶಯ
ಗರಿಷ್ಠ ಮಟ್ಟ 588.24 ಮೀಟರ್
ಇಂದಿನ ಮಟ್ಟ 588.24
ಒಳ ಹರಿವು 39,141 ಕ್ಯೂಸೆಕ್
ಹೊರ ಹರಿವು 37,339 ಕ್ಯೂಸೆಕ್