ಪುತ್ತೂರು: ಸಂತ ಫಿಲೋಮಿನಾ ಪ್ರೌಢಶಾಲೆಯ ವಿದ್ಯಾರ್ಥಿಗಳು ವಾಣಿಜ್ಯಶಾಸ್ತ್ರಕ್ಕೆ ಸಂಬಂಧಿಸಿದ ಪ್ರಾಯೋಗಿಕ ವಿಷಯಗಳನ್ನು ಅರಿತುಕೊಳ್ಳುವ ಉದ್ದೇಶದಿಂದ ಕಾಲೇಜಿನ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಕಾಮರ್ಸ್ ಲ್ಯಾಬ್‍ಗೆ ಆಗಸ್ಟ್ 28 ರಂದು ಅಧ್ಯಯನ ಭೇಟಿ ಕಾರ್ಯಕ್ರಮವನ್ನು ಸಂಯೋಜಿಸಿದರು.
ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗವು ಆಧುನಿಕ ರೀತಿಯ ಕಾಮರ್ಸ್ ಲ್ಯಾಬ್‍ನ್ನು ಹೊಂದಿದ್ದು, ಇದರಲ್ಲಿ ಬ್ಯಾಂಕಿಂಗ್, ಷೇರು ಮಾರುಕಟ್ಟೆ, ಅಂತರ್ ರಾಷ್ಟ್ರೀಯ ವ್ಯಾಪಾರ, ಪ್ರವಾಸೋದ್ಯಮ, ಕೈಗಾರಿಕೆ, ವಿಮೆ , ಲೆಕ್ಕ ಪರಿಶೋಧನೆ , ಸಹಕಾರಿ ಸಂಘಗಳ ಮಾಹಿತಿ, ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ವಿದೇಶಿ ನಾಣ್ಯಗಳು, ಅಂಚೆ ಚೀಟಿ ಸಂಗ್ರಹ , ಮುಂಗಡ ಪತ್ರ , ಮೆಮೊರಾಂಡಮ್ ಆಫ್ ಅಂಡರ್‍ಸ್ಟಾಂಡಿಂಗ್, ಪಾನ್ ಕಾರ್ಡ್ ಅರ್ಜಿ , ಸಂದರ್ಶನ ಪ್ರಕ್ರಿಯೆ, ವಾಣಿಜ್ಯ ಸಂಬಂಧಿ ತಂತ್ರಜ್ಞಾನ, ಕೇಸ್ ಸ್ಟಡಿ, ತೆರಿಗೆ ವಿನಾಯಿತಿಗೆ ಸಂಬಂಧಿಸಿದ ಮಾಹಿತಿಗಳನ್ನು ಒಳಗೊಂಡಿದೆ.
ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಪ್ರಯೋಗಾಲಯದ ಕುರಿತು ಮಾಹಿತಿಯನ್ನು ನೀಡಿ, ಸಂವಾದ ನಡೆಸಿದರು. ಸಂತ ಫಿಲೋಮಿನಾ ಪ್ರೌಢ ಶಾಲೆಯ ಶಿಕ್ಷಕಿ ಆಶಾ ರೆಬೆಲ್ಲೊ ಕಾರ್ಯಕ್ರಮವನ್ನು ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು ಮಾರ್ಗದರ್ಶನ ನೀಡಿದರು.