Sunday, January 19, 2025
ಸುದ್ದಿ

ಮಗುವಿನ ಹೃದ್ರೋಗ ಸಮಸ್ಯೆಗೆ ಸ್ಪಂದಿಸಿ, ನೆರವು ನೀಡಿ ಮಾನವೀಯತೆ ಮೆರೆದ ಅಶೋಕ್ ರೈ ಪುತ್ತೂರು – ಕಹಳೆ ನ್ಯೂಸ್

ಪುತ್ತೂರು: ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ರವಿಕುಮಾರ್ ಮತ್ತು ಸುಜಾತ ದಂಪತಿಗೆ ಇಬ್ಬರು ಮಕ್ಕಳು  ಅದರಲ್ಲಿ ಎರಡನೇ ಮಗು ಒಂದು ವರ್ಷದ ನಾಲ್ಕು ತಿಂಗಳು ಪ್ರಾಯದ ತ್ರೀಕ್ಷಿತ್ ಗೆ ಹೃದ್ರೋಗ ಸಮಸ್ಯೆ ಉಂಟಾಗಿತ್ತು. ಆರ್ಥಿಕವಾಗಿ ಅಷ್ಟೇನೂ ಸಬಲರಲ್ಲದ ಆ ಕುಟುಂಬಕ್ಕೆ  ಹೆಚ್ಚಿನ ಚಿಕಿತ್ಸೆಗೆ ಆರ್ಥಿಕ ಅಡಚಣೆಯಾಗಿತ್ತು. ಪತ್ರಿಕೆಯಲ್ಲೂ ಈ ಬಗ್ಗೆ ಸಚಿತ್ರ ವರದಿ ಪ್ರಕಟವಾಗಿತ್ತು .ಮಗುವಿನ ಅನಾರೋಗ್ಯ ,ಅಗತ್ಯವಾಗಿ ಬೇಕಿದ್ದ ತುರ್ತು ಚಿಕಿತ್ಸೆ , ಅದಕ್ಕಾಗಿ ಉಂಟಾದ ಆರ್ಥಿಕ ಸಂಕಷ್ಟ ,ಇದನ್ನೆಲ್ಲಾ ತಿಳಿದ ಬಿಜೆಪಿ ಮುಖಂಡ  ಅಶೋಕ್ ಕುಮಾರ್ ರೈ ಯವರು ತನ್ನ  ನೇತೃತ್ವದ ರೈ ಎಸ್ಟೇಟ್ಸ್ ಟ್ರಸ್ಟ್ ಮೂಲಕ ಒಂದಷ್ಟು  ಆರ್ಥಿಕ ನೆರವನ್ನು ನೀಡಿದ್ದರು.

ಇಷ್ಟು ಮಾತ್ರವಲ್ಲದೆ, ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲೂ ಅದರ ಖರ್ಚು-ವೆಚ್ಚಕ್ಕೆ  ನೆರವಾಗುವ ಭರವಸೆಯನ್ನು  ಅಂದೇ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿಗೆ ಕಳುಹಿಸಿ ಚಿಕಿತ್ಸೆ ಕೊಡಿಸಿ – ಸಂಪೂರ್ಣ ಚಿಕಿತ್ಸಾ ಖರ್ಚು ನಿಭಾಯಿಸಿದ ಮಾನವಂತ ಆಶೋಕ್ ರೈ

ಜಾಹೀರಾತು
ಜಾಹೀರಾತು
ಜಾಹೀರಾತು

ತ್ರೀಕ್ಷಿತ್ ನ ಹದಗೆಡುತ್ತಿರುವ ಆರೋಗ್ಯದ ತುರ್ತು ಚಿಕಿತ್ಸೆಗೆ  ಬೆಂಗಳೂರಿನಲ್ಲಿರುವ  ನಾರಾಯಣ ಹೃದಯಾಲಯಕ್ಕೆ ಬೆಂಗಳೂರಿನ ಗಂಗಾಧರ್ ರೈ ಮತ್ತು ತನ್ನ ಕಛೇರಿಯ ಸಿಬ್ಬಂದಿಗಳ ಜೊತೆ ಈ ಕುಟುಂಬವನ್ನು ಅಶೋಕ್ ಕುಮಾರ್ ರೈ ಯವರು ಕಳುಹಿಸಿಕೊಟ್ಟರು. ವೈದ್ಯರಾದ ಡಾ. ದೇವಿಪ್ರಸಾದ್ ಶೆಟ್ಟಿಯವರು ಪರೀಕ್ಷೆ ನಡೆಸಿ ಸರಿಯಾದ ಚಿಕಿತ್ಸೆ ಸಿಗುವಂತೆ ಇದೇ ರೈ ಚಾರಿಟೇಬಲ್ ಟ್ರಸ್ಟ್ ನೋಡಿಕೊಂಡಿತ್ತು.  ಬೆಂಗಳೂರಿನ ಆಸ್ಫತ್ರೆಯ ಎಲ್ಲಾ ಚಿಕಿತ್ಸ ವೆಚ್ಚ , ಬೆಂಗಳೂರಿನ ಎಲ್ಲಾ ಖರ್ಚು -ವೆಚ್ಚ ,ಮಗುವಿಗೆ ಮುಂದಿನ ಆರು  ತಿಂಗಳಿಗೆ ಬೇಕಾಗುವ ಔಷಧಿಯ ವೆಚ್ಚವನ್ನು ಸ್ವತಃ ಅಶೋಕ್ ರೈ ಯವರು ತನ್ನ ಟ್ರಸ್ಟ್ ಮೂಲಕ ಬರಿಸಿದ್ದಾರೆ.

ಮಗುವಿಗೆ ಹೃದಯವು ದುರ್ಬಲವಾಗಿರುವುದರಿಂದ ಸದ್ಯದ ಮಟ್ಟಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಉಂಟಾಗಿರುವುದಿಲ್ಲ ಎಂದು ವೈದ್ಯರು ತಿಳಿಸಿರುವುದರಿಂದ ಮುಂಬರುವ ದಿನಗಳಲ್ಲಿ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಉಂಟಾದ ಸಂದರ್ಭದಲ್ಲೂ ಕುಟುಂಬದ ಬೆನ್ನಿಗೆ ನಿಂತು ಸಂಪೂರ್ಣ ಸಹಕಾರ ನೀಡುವ ಭರವಸೆಯಿತ್ತಿದ್ದಾರೆ ಎಂಬ ಮಾಹಿತಿ ಕಹಳೆ ನ್ಯೂಸ್ ಗೆ ಲಭಿಸಿದೆ.

ವರದಿ : ಕಹಳೆ ನ್ಯೂಸ್

Leave a Response