Saturday, November 23, 2024
ಸುದ್ದಿ

ವಿವೇಕಾನಂದ ಸ್ನಾತಕೋತ್ತರ ಸಂಶೋಧನ ಮತ್ತು ಅಧ್ಯಯನ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ – ಕಹಳೆ ನ್ಯೂಸ್

ಪುತ್ತೂರು: ಶಿಕ್ಷಕ ವೃತ್ತಿಯೆಂಬುದು ಕೇವಲ ಉದ್ಯೋಗವಲ್ಲ ಅದು ತಪಸ್ಸಿದ್ದಂತೆ. ಶಿಕ್ಷಕ ವೃತ್ತಿ ಎಂಬುದಕ್ಕಿಂತ ಇದೊಂದು ಜವಾಬ್ದಾರಿಯುತ ಸೇವೆ. ಏಕೆಂದರೆ ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳ ಹೊರತಾಗಿ ಪ್ರಜ್ಞಾವಂತ ಸಮಾಜವನ್ನು ನಿರ್ಮಿಸುವ ಕಾರ್ಯ ಶಿಕ್ಷಕರದ್ದು ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಸಂಶೋಧನ ಮತ್ತು ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಒಳಿತು ಕೆಡಕು ಮನಸ್ಸಿಗೆ ಸಂಬಂಧಪಟ್ಟದ್ದು. ಕೆಟ್ಟ ಚಿಂತನೆಗಳನ್ನು ಹೊರಹಾಕಿ ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗಿದೆ. ವಿದ್ಯಾರ್ಥಿಗಳು ತಮ್ಮ ಕರ್ತವ್ಯವನ್ನು ಶ್ರದ್ಧೆ, ನಿಷ್ಟೆಯಿಂದ ಮಾಡಿದರೆ ಅದುವೇ ಶಿಕ್ಷಕನಿಗೆ ಸಂತಸದ ಕ್ಷಣವಾಗುತ್ತದೆ. ಅದರೊಂದಿಗೆ ಪ್ರತಿಯೊಂದು ವಿಷಯಗಳ ಕುರಿತ ಸಮಗ್ರ ವಿಚಾರಗಳನ್ನು ಅರಿತುಕೊಳ್ಳುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ಸ್ನಾತಕೋತ್ತರ ಸಂಶೋಧನ ಹಾಗೂ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿಜಯಸರಸ್ವತಿ ಮಾತನಾಡಿ, ಗುರು- ಶಿಷ್ಯರ ಸಂಬಂಧ ಬೆರಳು ಮತ್ತು ಕಣ್ಣು ಇದ್ದಂತೆ, ಒಂದಕ್ಕೆ ನೋವಾದರೆ ಇನ್ನೊಂದು ಸ್ಪಂದಿಸುತ್ತದೆ. ಅಂತಹಾ ಭಾಂದವ್ಯ ಬೆಳೆದಲ್ಲಿ ಕಲಿಕೆಯ ಮಹತ್ವ ಹೆಚ್ಚ್ಚುತ್ತದೆ. ಓರ್ವ ಗುರು ತನ್ನ ಇರುವಿಕೆಯನ್ನು ಸರಿಯಾಗಿ ಬಳಸಿಕೊಂಡು, ಜವಾಬ್ದಾರಿಯನ್ನು ಅರಿತು ನಿರ್ವಹಿಸಿದರೆ ಮಾತ್ರ ಒಂದು ಸುಂದರ ಸಮಾಜ ನಿರ್ಮಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗಗಳ ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಚೈತ್ರಶ್ರೀ ಸ್ವಾಗತಿಸಿದರು. ದೀಪ ಪ್ರಸನ್ನ ಪ್ರಾರ್ಥಿಸಿದರು. ಚಂದನ್ ವಂದಿಸಿದರು. ವಿದ್ಯಾರ್ಥಿನಿ ಶ್ವೇತ ಕಾರ್ಯಕ್ರಮ ನಿರೂಪಿಸಿದರು.