Sunday, November 24, 2024
ಸುದ್ದಿ

ಭಟ್ಕಳದಲ್ಲಿ ಶಿಕ್ಷಕರ ದಿನಾಚರಣೆ ಸಂಭ್ರಮ – ಕಹಳೆ ನ್ಯೂಸ್

ಭಟ್ಕಳ: ನಮ್ಮ ಹಿರಿಯರು ಒಂದು ಮಾತನ್ನು ಹೇಳುತ್ತಿದ್ದರು “ ಹಿಂದೆ ಗುರುವಿರಬೇಕು ಮುಂದೆ ಗುರಿಯಿರಬೇಕು “ ಆಗ ಮಾತ್ರ ಸಾರ್ಥಕ್ಯದ ಜೀವನವನ್ನು ಸಾಗಿಸುವಲ್ಲಿ ವ್ಯಕ್ತಿ ಯಶಸ್ವಿಯಾಗುತ್ತಾನೆ ಎಂದು. ಈ ಮಾತಿನ ಸಂಪೂರ್ಣ ನೈಜತೆಯನ್ನು ನನ್ನ ಜೀವನದಲ್ಲಿ ಅನುಭವಿಸಿರುತ್ತೇನೆ. ಇಂದು ಈ ಪದವಿಯನ್ನು ನಾನು ಪಡೆದಿದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ಗುರುಗಳು ನನಗೆ ನೀಡಿದ ವಿದ್ಯೆ ಮತ್ತು ನಾನು ಅವರ ಮೇಲಿಟ್ಟ ಭಕ್ತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿಕ್ಷಣವೆನ್ನುವುದು ಸಾರ್ವತ್ರಿಕ ಹಾಗೂ ನಿರಂತರ ಪ್ರಕ್ರಿಯೆ . ಇದರಲ್ಲಿ ಪ್ರತಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಅದಕ್ಕಾಗಿಯೇ ಅನೇಕ ರಾಷ್ಟ್ರಗಳಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.ಯುನೆಸ್ಕೋ ಸಂಸ್ಥೆಯು ಸಪ್ಟಂಬರ 5 ನ್ನು ವಿಸ್ವ ಶಿಕ್ಷಕರ ದಿನವೆಂದು ಘೋಷಿಸಿದೆ. ಭಾರತದಲ್ಲಿ ಸಪ್ಟಂಬರ 5, 1962 ರಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಪದ್ಧತಿ ರೂಢಿಗೆ ಬಂತು. ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ನ್ ಅವರ ಹುಟ್ಟುಹಬ್ಬವನ್ನೇ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಭಟ್ಕಳ ಶಾಸಕ ಸುನೀಲ್ ನಾಯ್ಕ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ ನಮ್ಮಂಥ ಅಗಣಿತ ಮಂದಿಯ ಬಾಳಿಗೆ ಭವ್ಯ ಬೆಳಕು ನೀಡಿದ ಪರಮಗುರುಗಳಿಗೆ ಮತ್ತು ಗುರು ಸಮಾನರಿಗೆ ಈ ದಿನದ ಶುಭಾಶಯಗಳು.