Sunday, November 24, 2024
ಸುದ್ದಿ

ಮಹಾರಾಷ್ಟ್ರದಲ್ಲಿ ಭಾರೀ ಮಳೆ; ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ; ಹೆಚ್ಚಾದ ಕೃಷ್ಣಾ ನದಿಯ ಒಳಹರಿವಿನ ಪ್ರಮಾಣ; ಆತಂಕದಲ್ಲಿ ನದಿಪಾತ್ರದ ಜನತೆ – ಕಹಳೆ ನ್ಯೂಸ್

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು, ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಕೃಷ್ಣಾ ನದಿಯ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ನದಿಪಾತ್ರದ ಜನರು ಆತಂಕದಲ್ಲಿದ್ದಾರೆ. ರಾಜ್ಯದ ವಿವಿಧ ಜಲಾಶಯಗಳ ನೀರಿನ ಪ್ರಮಾಣ ಹೆಚ್ಚಾಗಿದೆ. ಅವುಗಳ ಇಂದಿನ ನೀರಿನ ಮಟ್ಟ ಇಂತಿದೆ.

ಕೆ.ಆರ್.ಸಾಗರದ ನೀರಿನ ಮಟ್ಟ
ಗರಿಷ್ಟ ಮಟ್ಟ-124.80
ಪ್ರಸ್ತುತ ಮಟ್ಟ-124.80
ಒಳಹರಿವು-44727
ಹೊರಹರಿವು-52807
ಸಂಗ್ರಹ-49.452 ಟಿಎಂಸಿ

ಜಾಹೀರಾತು
ಜಾಹೀರಾತು
ಜಾಹೀರಾತು

ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ: 1819 ಅಡಿ
ಇಂದಿನ ಮಟ್ಟ:1818.20
ಒಳ ಹರಿವು:42,687 ಕ್ಯೂಸೆಕ್
ಹೊರ ಹರಿವು:65,171 ಕ್ಯೂಸೆಕ್

ಜಾಹೀರಾತು
ಜಾಹೀರಾತು
ಜಾಹೀರಾತು

ಭದ್ರಾ ಜಲಾಶಯ
ಗರಿಷ್ಠ ಮಟ್ಟ:186 ಅಡಿ
ಇಂದಿನ ಮಟ್ಟ:185.60ಅಡಿ
ಒಳ ಹರಿವು:23,488 ಕ್ಯೂಸೆಕ್
ಹೊರ ಹರಿವು:26,821 ಕ್ಯೂಸೆಕ್

ತುಂಗಾ ಜಲಾಶಯ
ಗರಿಷ್ಠ ಮಟ್ಟ: 588.24 ಮೀಟರ್
ಇಂದಿನ ಮಟ್ಟ:588.24
ಒಳ ಹರಿವು:38,651 ಕ್ಯೂಸೆಕ್.
ಹೊರ ಹರಿವು:37,339 ಕ್ಯೂಸೆಕ್

ಕಬಿನಿ ಜಲಾಶಯ ಜಲಾಶಯ
ಇಂದಿನ ಒಳಹರಿವು 24,321 ಕ್ಯೂಸೆಕ್
ಇಂದಿನ ಹೊರಹರಿವು 22,692 ಕ್ಯೂಸೆಕ್
ಇಂದಿನ ನೀರಿನ ಮಟ್ಟ 2283.43 ಅಡಿ
ಗರಿಷ್ಠ ನೀರಿನ ಮಟ್ಟ 2284 ಅಡಿ
ಒಟ್ಟು ನೀರಿನ ಸಂಗ್ರಹ ಸಾರ್ಮಥ್ಯ 19.52 ಟಿಎಂಸಿ
ಜಲಾಶಯದಲ್ಲಿ ಇಂದು ಇರುವ ನೀರಿನ ಸಂಗ್ರಹ 19.14 ಟಿಎಂಸಿ