Recent Posts

Tuesday, January 21, 2025
ಸುದ್ದಿ

ಭಾರತದ ಗಡಿಯಲ್ಲಿ ತೀವ್ರ ಕಟ್ಟೆಚ್ಚರ – ಕಹಳೆ ನ್ಯೂಸ್

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ 370 ವಿಧಿ ರದ್ದುಗೂಳಿಸಿದ ಬಳಿಕ ಪಾಕಿಸ್ತಾನ ತನ್ನ ಕ್ಯಾತೆಯನ್ನು ಮತ್ತೆ ಮುಂದುವರಿಸಿದೆ. ಗಡಿ ನಿಯಂತ್ರಣ ರೇಖೆ ಬಳಿ ಭಾರೀ ಸಂಖ್ಯೆಯಲ್ಲಿ ಸೈನಿಕರ ಜಮಾವಣೆ ಹಾಗೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರವನ್ನು ಸಂಗ್ರಹಿಸಿದೆ. ರಾವಲ್‍ಕೋಟ್‍ನ ರಾಖ್ ಚಕ್ರಿ ವಲಯದಲ್ಲಿ ಪಾಕಿಸ್ತಾನ ತನ್ನ ಕುಕೃತ್ಯವನ್ನು ನಡೆಸಲು ಸಿದ್ದತೆ ನಡೆಸಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ. ಇನ್ನು ಉತ್ತರ ಗುರೇಜ್ ಸೆಕ್ಟರ್‍ ನಲ್ಲಿ ಭಾರತಕ್ಕೆ ನುಸುಳಲು 60ಕ್ಕೂ ಹೆಚ್ಚು ಉಗ್ರರು ಹೊಂಚು ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಭಾರತ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು