Wednesday, January 22, 2025
ಸುದ್ದಿ

ಉಳ್ಳಾಲದಲ್ಲಿ ದೋಣಿ ಮಗುಚಿ ಮೀನುಗಾರ ಮೃತ್ಯು – ಕಹಳೆ ನ್ಯೂಸ್

ಉಳ್ಳಾಲ: ಮೀನು ಹಿಡಿಯಲು ನಾಡದೋಣಿಯಲ್ಲಿ ತೆರಳಿದ್ದ ವ್ಯಕ್ತಿಯೋರ್ವರು ದೋಣಿ ಮಗುಚಿ ಮೃತಪಟ್ಟಿದ್ದು, ಶುಕ್ರವಾರ ಅವರ ಮೃತದೇಹವು ಕೋಟೆಪುರದ ನೇತ್ರಾವತಿ ಹಿನ್ನೀರಿನ ನದಿ ತೀರದಲ್ಲಿ ಪತ್ತೆಯಾಗಿದೆ.

ಉಳ್ಳಾಲ ಉಳಿಯ ನಿವಾಸಿ ಮಾಕ್ಸಿಮ್ ಡಿಸೋಜ(56)ಮೃತ ವ್ಯಕ್ತಿ. ಮ್ಯಾಕ್ಸಿಮ್ ಅವರು ಮೀನುಗಾರನಾಗಿದ್ದು ಸೆ. 4ರಂದು ಉಳಿಯದಿಂದ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದು, ಮನೆಗೆ ಮರಳಿರಲಿಲ್ಲ. ಇದೀಗ ಅವರ ಮೃತದೇಹವು ನದಿ ತೀರದಲ್ಲಿ ಸಿಕ್ಕಿದೆ. ಅವರು ತೆರಳಿದ್ದ ನಾಡದೋಣಿ ಪತ್ತೆಯಾಗಿಲ್ಲ. ಮ್ಯಾಕ್ಸಿಮ್ ಅವರ ಮಗನ ದೂರಿನನ್ವಯ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು