Sunday, November 24, 2024
ಸುದ್ದಿ

ನಾನು ರಾಷ್ಟ್ರಪತಿಯಾಗ್ತೀನಿ ..? ಯಾಕೆ ಪ್ರಧಾನಿ ಆಗಬಹುದಲ್ವಾ..? ವಿದ್ಯಾರ್ಥಿ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರ.. ಕಹಳೆ ನ್ಯೂಸ್

ಬೆಂಗಳೂರು: ಚಂದ್ರಯಾನ-2 ಹಿನ್ನಡೆಯಾದ ಹಿನ್ನಲೆಯಲ್ಲಿ ನಿರಾಶೆಯಲ್ಲಿದ್ದ ಇಸ್ರೋ ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಳಿಕ ವಿದ್ಯಾರ್ಥಿಗಳೊಂದಿಗೆ ಚಟುಕು ಸಂವಾದ ನಡೆಸಿದ್ದಾರೆ.
ಇಸ್ರೋ ಕಂಟ್ರೋಲ್ ಸೆಂಟರ್ ನಲ್ಲಿ ಇಸ್ರೋ ವಿಜ್ಞಾನಿಗಳನ್ನು ಕೊಂಡಾಡಿದ ಪ್ರಧಾನಿ ಮೋದಿಯವರು ಬಳಿಕ ಹೊರ ಹೋಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಚುಟುಕು ಸಂವಾದ ನಡೆಸಿದ್ದಾರೆ. ಹೊರ ಹೋಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಹಿಂದೆ ಆಗಿದ್ದನ್ನು ಮರೆತುಬಿಡಬೇಕು. ಮುಂದಿನ ಬಗ್ಗೆ ಚಿಂತಿಸಬೇಕೆಂದು ಕಿವಿಮಾತು ಹೇಳಿದರು.

ಈ ವೇಳೆ ವಿದ್ಯಾರ್ಥಿಯೊಬ್ಬ ದೇಶದ ರಾಷ್ಟ್ರಪತಿಗಳಾಗಬೇಕಾದರೆ ಏನನ್ನು ಮಾಡಬೇಕು. ಯಾವ ರೀತಿ ತಯಾರಿ ನಡೆಸಬೇಕು ಎಂದು ಪ್ರಶ್ನೆ ಕೇಳಿದ್ದಾನೆ. ಈ ವೇಳೆ ಪ್ರತಿಕ್ರಿಯೆ ನೀಡಿದ ಮೋದಿಯವರು, ರಾಷ್ಟ್ರಪತಿ ಏಕೆ? ಪ್ರಧಾನಮಂತ್ರಿ ಏಕಾಗಬಾರದು? ಎಂದು ಮರು ಪ್ರಶ್ನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿರುವ ಅವರು, ಜೀವನದಲ್ಲಿ ಗುರಿ ದೊಡ್ಡದಾಗಿರಬೇಕು. ಆ ಗುರಿಯನ್ನು ಚಿಕ್ಕ ಚಿಕ್ಕ ಭಾಗಗಳನ್ನಾಗಿ ಮಾಡಿಕೊಳ್ಳಬೇಕು. ಬಳಿಕ ಆ ಚಿಕ್ಕ ಚಿಕ್ಕ ಗುರಿಗಳನ್ನು ಸಾಧಿಸಲು ಮುಂದಾಗಬೇಕು. ಯಾವುದನ್ನು ಕಳೆದುಕೊಂಡಿದ್ದೀರೋ ಅದನ್ನು ಮರೆತುಬಿಡಿ. ಜೀವನದ ಮುಂದಿನ ಹಾದಿಗಳನ್ನೂ ನಿರಾಶೆಯಾಗೊಳ್ಳದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು