Recent Posts

Sunday, January 19, 2025
ಸುದ್ದಿ

ಮೂರು ವರ್ಷಗಳ ಹಿಂದಿನ ಗೋವಿಂದರಾಜು ಡೈರಿ ಪ್ರಕರಣಕ್ಕೆ ಮತ್ತೆ ಮರುಜೀವ – ರಾಜ್ಯ ಕಾಂಗ್ರೆಸ್ ಭ್ರಷ್ಟರ ಗುಂಡಿಗೆ ಢವಢವ – ಕಹಳೆ ನ್ಯೂಸ್

ಬೆಂಗಳೂರು : ನಾಲ್ಕು ವರ್ಷಗಳ ಹಿಂದೆ ದೊಡ್ಡ ಸುದ್ದಿಯಾಗಿದ್ದ ಹಾಗೂ ಕಾಂಗ್ರೆಸ್ಸಿಗರ ಎದೆ ನಡುಗಿಸಿದ್ದ ಗೋವಿಂದರಾಜು ಡೈರಿ ಕೇಸ್‍ಗೆ ಈಗ ಮರುಜೀವ ಬಂದಿದೆ. ಈ ಡೈರಿಯ ಮೂರನೇ ಪುಟದಲ್ಲಿ ಬರೆದಿರುವ ಕೋಡ್‍ವರ್ಡ್‍ಗಳೇ ಈಗ ಕಾಂಗ್ರೆಸ್ ನಾಯಕರಿಗೆ ಉರುಳಾಗುವ ಸಾಧ್ಯತೆ ಇದೆ. ಇದನ್ನೇ ಗಾಳವಾಗಿಟ್ಟುಕೊಂಡು ಐಟಿಯಿಂದ ತನಿಖೆ ನಡೆಯುವ ಸಾಧ್ಯತೆ ಇದೆ ಎಂದು ನ್ಯೂಸ್18 ಕನ್ನಡಕ್ಕೆ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಡೈರಿ ಬರೆದಿರುವ ಎಂಎಲ್‍ಸಿ ಗೋವಿಂದರಾಜು ಹಾಗೂ ಕಪ್ಪ ಕಾಣಿಕೆ ಕೊಟ್ಟಿದ್ದರೆನ್ನಲಾದ ಹೆಚ್.ಡಿ. ಮಹದೇವಪ್ಪ ಮತ್ತು ಕೆ.ಜೆ. ಜಾರ್ಜ್ ಅವರಿಗೆ ಈ ಪ್ರಕರಣ ಉರುಳಾಗಬಹುದೆನ್ನಲಾಗಿದೆ. ಹಿರಿಯ ಕಾಂಗ್ರೆಸ್ಸಿಗರಾದ ಪಿ. ಚಿದಂಬರಮ್ ಮತ್ತು ಡಿಕೆ ಶಿವಕುಮಾರ್ ಅವರ ಬಂಧನವಾಗಿರುವ ಹಿನ್ನೆಲೆಯಲ್ಲಿ ಡೈರಿ ಪ್ರಕರಣ ಮರುಜೀವ ಪಡೆದಿರುವುದು ಇನ್ನೂ ಹಲವು ನಾಯಕರ ಎದೆ ನಡುಗಿಸಿದೆ. ಕುತೂಹಲವೆಂದರೆ ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣಕ್ಕೂ ಕೂಡ ಗೋವಿಂದ ರಾಜು ಡೈರಿಯೇ ಮೂಲವಾಗಿರುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

2016ರಲ್ಲಿ ಆದಾಯ ತೆರಿಗೆ ಕಟ್ಟದವರ ಮೇಲೆ ನಿಯಮಿತವಾಗಿ ನಡೆಯುವ ರೇಡ್ ವೇಳೆ ಎಂಎಲ್‍ಸಿ ಗೋವಿಂದ ರಾಜು ಮನೆಯಲ್ಲಿ ಡೈರಿಯೊಂದು ಸಿಕ್ಕಿತ್ತು. ಈ ಪುಸ್ತಕದ ಕೆಲ ಪುಟಗಳಲ್ಲಿ ಕೆಲ ಹೆಸರುಗಳ ಕೋಡ್‍ವರ್ಡ್ ಮತ್ತು ಹಣದ ವಿವರವನ್ನು ಕೈಬರಹದಲ್ಲಿ ಬರೆಯಲಾಗಿತ್ತು. ಅದರಲ್ಲಿ ರಾಜ್ಯ ಮತ್ತು ಕೇಂದ್ರ ಕಾಂಗ್ರೆಸ್ ನಾಯಕರ ಹೆಸರುಗಳನ್ನು ಕೋಡ್‍ವರ್ಡ್‍ನಲ್ಲಿ ಬರೆಯಲಾಗಿದೆ ಎಂಬುದು ಐಟಿ ಇಲಾಖೆಯ ಶಂಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡೈರಿಯಲ್ಲಿರುವ ಕೆಲ ಕೋಡ್‍ವರ್ಡ್‍ಗಳು ಹಾಗೂ ಐಟಿ ಅಧಿಕಾರಿಗಳು ಶಂಕಿಸಿರುವ ಸಂಬಂಧಿತ ನಾಯಕರ ಹೆಸರುಗಳ ಪಟ್ಟಿ ಇಲ್ಲಿದೆ:
ಎಸ್‍ಜಿ: ಸೋನಿಯಾ ಗಾಂಧಿ
ಆರ್‍ಜಿ: ರಾಹುಲ್ ಗಾಂಧಿ
ಎಂಆರ್‍ವಿ: ಮೋತಿಲಾಲ್ ವೋರಾ(ಎಐಸಿಸಿ ಮಾಜಿ ಖಜಾಂಚಿ)
ಆರ್‍ವಿಡಿ: ಆರ್.ವಿ. ದೇಶಪಾಂಡೆ
ಡಿಕೆಎಸ್: ಡಿಕೆ ಶಿವಕುಮಾರ್
ಕೆಂಪ್: ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ (ಸಿದ್ದರಾಮಯ್ಯ ಅವರ ಆಪ್ತ)
ಹೆಚ್‍ಸಿಎಂ: ಹೆಚ್.ಡಿ. ಮಹದೇವಪ್ಪ
ಇದರ ಜೊತೆಗೆ ಇನ್ನೂ ಒಂದಿಷ್ಟು ಹೆಸರುಗಳ ಕೋಡ್‍ವರ್ಡ್‍ಗಳನ್ನು ಡೈರಿಯ ಪುಟಗಳಲ್ಲಿ ಬರೆಯಲಾಗಿತ್ತು.

ಗೋವಿಂದರಾಜು ಅವರು ಆರಂಭದಲ್ಲಿ ಈ ಡೈರಿ ತನ್ನದಲ್ಲ, ತಾನೇನೂ ಬರೆದಿಲ್ಲ ಎಂದು ವಾದಿಸಿದ್ದರು. ಆದರೆ,ನಂತರದ ವಿಚಾರಣೆ ವೇಳೆ ಅವರು ಈ ಡೈರಿಯಲ್ಲಿರುವುದು ತನ್ನ ಕೈಬರಹವೇ ಎಂದು ಒಪ್ಪಿಕೊಂಡಿದ್ದರು. ಈ ತಪ್ಪೊಪ್ಪಿಗೆಯೇ ಐಟಿ ಇಲಾಖೆಯ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ.

ಡೈರಿಯ ಮೂರನೇ ಪುಟದಲ್ಲಿ ನಮೂದಾಗಿರುವ ಕೋಡ್‍ವರ್ಡ್‍ಗಳು ನಿರ್ದಿಷ್ಟ ನಾಯಕರಿಗೆ ಸಂಬಂಧಿಸಿದ್ದಾಗಿದೆ. ಈ ನಾಯಕರಿಂದ ಕೋಟಿಗಟ್ಟಲೆ ಹಣ ಪಡೆದು ಅದನ್ನು ಹೈಕಮಾಂಡ್‍ಗೆ ತಲುಪಿಸಲಾಗಿದೆ. ಹವಾಲ ಜಾಲದ ಮೂಲಕ ಹಣದ ವಹಿವಾಟು ನಡೆದಿದೆ ಎಂಬುದು ಐಟಿ ಅಧಿಕಾರಿಗಳ ಶಂಕೆಯಾಗಿದೆ.

ಈ ಡೈರಿ ವಿಚಾರಕ್ಕೆ ಸಂಬಂಧಿತವಾಗಿ ಐಟಿ ಅಧಿಕಾರಿಗಳು ಈಗಾಗಲೇ ಡಿಕೆ ಶಿವಕುಮಾರ್, ಆರ್.ವಿ. ದೇಶಪಾಂಡೆ ಸೇರಿದಂತೆ ಕೆಲವರ ವಿಚಾರಣೆ ನಡೆಸಿದ್ದಾರೆ. ಒಂದೆರಡು ತಿಂಗಳ ಹಿಂದೆ ಹೆಚ್.ಸಿ. ಮಹದೇವಪ್ಪ ಅವರ ವಿಚಾರಣೆಯೂ ನಡೆದಿದೆ. ಈಗ ಕೆ.ಜೆ. ಜಾರ್ಜ್ ಅವರ ವಿಚಾರಣೆ ನಡೆಸಲು ನೋಟೀಸ್ ನೀಡಲು ಐಟಿ ಇಲಾಖೆ ಸಜ್ಜಾಗಿರುವ ಮಾಹಿತಿ ಲಭ್ಯವಾಗಿದೆ. ವಿದೇಶದಿಂದ ಈಗಷ್ಟೇ ಬಂದಿರುವ ಈ ಪ್ರಕರಣದ ಮೂಲಬಿಂದು ಗೋವಿಂದ ರಾಜು ಅವರನ್ನು ಇನ್ನಷ್ಟು ವಿಸ್ತೃತ ತನಿಖೆಗೆ ಒಳಪಡಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಇದೇ ಕಾರಣಕ್ಕೆ ಕೆ.ಜೆ. ಜಾರ್ಜ್, ಮಹದೇವಪ್ಪ ಮತ್ತು ಗೋವಿಂದ ರಾಜು ಅವರ ಎದೆಯಲ್ಲಿ ಈಗಾಗಲೇ ತಳಮಳ ಶುರುವಾಗಿದೆ. ಈ ಮೂವರೂ ಕೂಡ ತಮ್ಮ ಆಪ್ತರ ಬಳಿ ತಮ್ಮ ಆತಂಕ ತೋಡಿಕೊಂಡಿರುವ ಬಗ್ಗೆ ಮಾಹಿತಿ ಖಾಸಗಿ ವಾಹಿನಿಯೊದಕ್ಕೆ ಲಭ್ಯವಾಗಿದೆ.