Recent Posts

Sunday, January 19, 2025
ಸುದ್ದಿ

2019-20ನೇ ಶೈಕ್ಷಣಿಕ ವರ್ಷದ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶ್ರೀಮತಿ ಲೀಲಾವತಿ ಆಯ್ಕೆ- ಕಹಳೆ ನ್ಯೂಸ್

ಶ್ರೀಮತಿ ಲೀಲಾವತಿ ಇವರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕುಪ್ಪೆಟ್ಟಿಗೆ ಸೇರ್ಪಡೆಯಾಗಿ 15ವರ್ಷ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ 2011 ಜೂನ್ 20ರಿಂದ ಸ.ಹಿ.ಪ್ರಾ. ಶಾಲೆ ಪಿಲಿಗೂಡಿಗೆ ವರ್ಗಾವಣೆಗೊಂಡು ಕರ್ತವ್ಯವೇ ದೇವರು, ಶಾಲೆಯೇ ದೇಗುಲ, ಮಕ್ಕಳೇ ದೇವರ ಪ್ರತಿರೂಪ, ಪೋಷಕರು, ಹಳೆ ವಿದ್ಯಾರ್ಥಿಗಳು, ಊರ ಪರವೂರ ಎಲ್ಲರನ್ನು ತನ್ನ ಶಾಲಾ ವಿದ್ಯಾಭಿಮಾನಿಗಳೇ ಎಂದುಕೊಂಡಿರುವ ಸ್ವಭಾವ ಹೊಂದಿದ ಇವರು ಮನುಷ್ಯನ ಜೀವನ ನಿಂತ-ನೀರಾಗಬಾರದೆಂದು ಮುನ್ನಡೆದು 2013ನೇ ಶೈಕ್ಷಣಿಕ ಸಾಲಿನಲ್ಲಿ ತಾಲೂಕಿನ ಉತ್ತಮ ಶಾಲಾ ಪ್ರಶಸ್ತಿ, 2015ನೇ ಸಾಲಿನಲ್ಲಿ ಶಾಲಾ ಕಿರಿಯರಿಂದ ಹಿರಿಯ ಆಗಿ ಮೇಲ್ದರ್ಜೆಗೇರಿತು.
ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಈ ಶಾಲೆಯಲ್ಲಿ ಭತ್ತದ ಗದ್ದೆ, ಅಕ್ಷರ ಕೈತೋಟ, ಅಡಿಕೆ ತೋಟ ಹಚ್ಚ ಹಸುರಾಗಿ ಕಂಗೊಳಿಸುತ್ತಿದೆ. ಇಲಾಖೆಯ ಅನುದಾನದೊಂದಿಗೆ ದಾನಿಗಳ ಸಹಕಾರ ಪಡೆದು ಶಾಲೆಯ ಮೂಲಭೂತ ಸೌಕರ್ಯವನ್ನು ಈಡೇರಿಸಲಾಗಿದೆ. ಇಲಾಖಾಧಿಕಾರಿಗಳ ಮಾರ್ಗದರ್ಶನದೊಂದಿಗೆ ಸದಾ ತಮ್ಮ ಮಕ್ಕಳ ಶೈಕ್ಷಣಿಕ ಸರ್ವತೋಮುಖ ಏಳಿಗೆಗಾಗಿ ಮನಃಪೂರ್ವಕ ದುಡಿಯುವ ಗುಣ ಇವರದ್ದಾಗಿದೆ. ಈ ಎಲ್ಲಾ ಸಾಧನೆ ಮತ್ತು ಗುಣ ಹೊಂದಿರುವ ಇವರು ಈ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಸೂಕ್ತ ಆಯ್ಕೆ.

ಜಾಹೀರಾತು

ಜಾಹೀರಾತು
ಜಾಹೀರಾತು