Sunday, November 24, 2024
ಸುದ್ದಿ

ರಾಷ್ಟ್ರೀಯ ಹೆದ್ದಾರಿ, ಸೇತುವೆ ನಿರ್ಮಾಣಗಳಿಗೆ ಚಾಲನೆ – ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ವಿಸ್ತರಿಸಲು ಕರ್ನಾಟಕದ ಹಲವು ರಸ್ತೆಗಳನ್ನು ಆಯ್ದುಕೂಂಡಿದ್ದು, ಈಗಾಗಲೇ ಶೇ.10ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಮತ್ತು ಮೈಸೂರು ನಡುವಿನ ಸಂಚಾರ ದಟ್ಟಣೆ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಈ ಎರಡು ನಗರಗಳ ರಸ್ತೆಯನ್ನು ಈಗಾಗಲೇ ನಾಲ್ಕು ಪಥಗಳ ಹೆದ್ದಾರಿ ರಸ್ತೆಯನ್ನಾಗಿ ಪರಿವರ್ತಿಸಲಾದರೂ ಕೆಂಗೇರಿ, ನೈಸ್ ಜಂಕ್ಷನ್, ಬಿಡದಿ, ರಾಮನಗರ, ಚೆನ್ನಪಟ್ಟಣಗಳಲ್ಲಿ ಪ್ಯಾಕೇಜ್ ಹೆಸರಿನಲ್ಲಿ ರಸ್ತೆಗಳ ಕಾಮಗಾರಿ ಆರಂಭವಾಗಲಿದೆ. 49 ಅಂಡರ್ ಪಾಸ್, 13 ಓವರ್ ಪಾಸ್ ಮಾಡಲು ಚಾಲನೆ ದೂರಕಿದೆ. ಇನ್ನು ಶ್ರೀರಂಗ ಪಟ್ಟಣದಲ್ಲಿ ಎಲಿವೇಟೆಡ್ ರಸ್ತೆ ನಿರ್ಮಿಸುವ ಯೋಜನೆ ಹಾಕಿಕೂಳ್ಳಲಾಗಿದೆ. ಮಂಡ್ಯದ ಕೆನಾಲ್, ಲೋಕಪಾವನಿ ನದಿಗಳಿಗೆ ಸೇತುವೆ ನಿರ್ಮಿಸಲು ಟೆಂಡರ್ ಕರೆಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು