Monday, November 25, 2024
ಸುದ್ದಿ

ಲೇಲ್ಯಾಂಡ್ ಕಂಪೆನಿಯಿಂದ ವಾಹನ ಉತ್ಪಾದನೆ ಸ್ಥಗಿತ – ಕಹಳೆ ನ್ಯೂಸ್

ದೆಹಲಿ: ದೇಶದ ಮೂರನೇ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕ ಕಂಪನಿಯಾಗಿರುವ ಆಶೋಕ್ ಲೇಲ್ಯಾಂಡ್ ಕಂಪೆನಿಯ ಚೆನೈ ಕೇಂದ್ರ ಕಛೇರಿಯಲ್ಲಿ ಮುಂದಿನ ಐದು ದಿನಗಳ ಕಾಲ ವಾಹನ ಉತ್ಪಾದನೆಯನ್ನು ನಿಲ್ಲಿಸಿದೆ.
ನಿರಂತರವಾಗಿ ವಾಣಿಜ್ಯ ವಾಹನಗಳ ಮಾರುಕಟ್ಟೆ ಕುಸಿಯುತ್ತಿದ್ದು, ದೇಶದಲ್ಲಿರುವ 8,296 ಲೇಲ್ಯಾಂಡ್ ಘಟಕಗಳಲ್ಲಿ ಆಗಸ್ಟ್ ತಿಂಗಳಲ್ಲಿ ವಾಹನ ಮಾರಾಟವೂ ಶೇ.50 ರಷ್ಟು ಕುಸಿದಿದೆ. ದಾಖಲೆ ಪ್ರಮಾಣದಲ್ಲಿ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ, ಮಾರುತಿ ಸುಝಕಿ ಆಗಸ್ಟ್ ತಿಂಗಳಲ್ಲಿ ಶೇ. 33.90ರಷ್ಟು ಉತ್ಪಾದನೆಯನ್ನು ಕಡಿತಗೊಳಿಸಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ ತನ್ನ ಉತ್ಪಾದನೆಯನ್ನು ಸತತ 7ನೇ ತಿಂಗಳು ಕಡಿತಗೊಳಿಸಿದೆ ಈ ಹಿನ್ನಲೆಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು