Monday, November 25, 2024
ಸುದ್ದಿ

ಫಿಲೋಮಿನಾದಲ್ಲಿ ಹಿಂದಿ ಸ್ಪರ್ಧೋತ್ಸವ ‘ಇಂದ್ರಧನುಷ್ 2019’ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ಭಾರತದ ಹಲವು ಭಾಷೆಗಳಲ್ಲಿ ಒಂದಾಗಿರುವ ಹಿಂದಿಯನ್ನು ದೇಶದ ಒಟ್ಟು ಜನಸಂಖ್ಯೆಯ ಸಿಂಹಪಾಲು ಜನ ಬಳಸುತ್ತಾರೆ. ದೇಶದ ಉದ್ದಗಲಕ್ಕೆ ಸಂಚರಿಸಿದರೆ ಹಿಂದಿ ಬರೆಯಬಲ್ಲ, ಓದಬಲ್ಲ, ಅರ್ಥೈಸಿಕೊಳ್ಳಬಲ್ಲ ಜನ ಸಾಕಷ್ಟು ಸಂಖ್ಯೆಯಲ್ಲಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥ ಡಾ| ಆರ್ ನಾಗೇಶ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂತ ಫಿಲೋಮಿನಾ ಕಾಲೇಜಿನ ಹಿಂದಿ ವಿಭಾಗದ ಆಶ್ರಯದಲ್ಲಿ ಹಿಂದಿ ದಿವಸ್ ಅಂಗವಾಗಿ ಸೆಪ್ಟಂಬರ್ 5ರಂದು ಕಾಲೇಜಿನ ಬೆಳ್ಳಿ ಹಬ್ಬ ಸಬಾಂಗಣದಲ್ಲಿ ಹಮ್ಮಿಕೊಂಡಿರುವ ‘ಇಂದ್ರಧನುಷ್-2019’ ಸ್ಪರ್ಧೋತ್ಸವವನ್ನು ಉದ್ಘಾಟಿಸಿ, ಮಾತನಾಡಿದರು. ಸಾಗರೋತ್ತರ ದೇಶಗಳಲ್ಲಿ ಹಿಂದಿ ಭಾಷೆಯ ಬಾಲಿವುಡ್ ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ ಆಯಾ ದೇಶಗಳಲ್ಲಿ ಹಿಂದಿ ಭಾಷೆಗೆ ಪ್ರಾಮುಖ್ಯತೆ ದೊರೆಯುತ್ತಿದೆ. ವಿಶ್ವದ ಸುಮಾರು 125 ವಿಶ್ವ ವಿದ್ಯಾನಿಲಯಗಳಲ್ಲಿ ಹಿಂದಿ ಭಾಷೆ ಪಠಣ ಮಾಡಲಾಗುತ್ತಿದೆ, ಹಿಂದಿ ಭಾಷೆಯ ಮಹತ್ವ ಅರಿತುಕೊಳ್ಳುವ ಅನಿವಾರ್ಯತೆ ಭಾರತೀಯರದ್ದು. ಶ್ರೀಮಂತವಾದ ಹಿಂದಿ ಭಾಷೆಯನ್ನು ಮತ್ತಷ್ಟು ಪ್ರೋತ್ಸಾಹಿಸುವ ಅಗತ್ಯ ಮತ್ತು ಜವಾಬ್ದಾರಿ ನಮ್ಮ ಮೇಲಿದೆ. ಹಾಗೆಯೇ ಹಿಂದಿ ಭಾಷೆ ಮರೆತರೆ ದೇಶಕ್ಕೆ ನಷ್ಟ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿಜಯ್ ಲೋಬೊ ಮಾತನಾಡಿ, ಯಾವುದೇ ಭಾಷೆಯನ್ನು ಕಲಿಯುವ ಅಭ್ಯಾಸ ಆರೋಗ್ಯಕರವಾದುದು. ಭಾಷೆಯ ಬಗೆಗೆ ತಾತ್ಸಾರವಿರಕೂಡದು. ಶಬ್ದಕೋಶದ ಬೆಳವಣಿಗೆಗೆ ಭಾಷೆಯೇ ಮೂಲ. ಭಾಷೆ ಜ್ಞಾನ ವೃದ್ದಿಗೆ ಸಹಕಾರಿ. ಜ್ಞಾನ ಸಂಪತ್ತನ್ನು ಅಗೆಯಲು ಭಾಷೆ ಮಾಧ್ಯಮವಾಗುತ್ತದೆ. ಭಾಷಾಸಂಪತ್ತು ಮಾನವನ ಅಸ್ತಿತ್ವವನ್ನು ರೂಪಿಸುತ್ತದೆ ಎಂದು ಹೇಳಿದರು.

ಈ ಸ್ಪರ್ಧೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ನಾನಾ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಸಂಯೋಜಕಿ, ಹಿಂದಿ ವಿಭಾಗ ಮುಖ್ಯಸ್ಥೆ ಡಾ| ಡಿಂಪಲ್ ಫೆರ್ನಾಂಡಿಸ್ ಮತ್ತು ಸಹಾಯಕಿ ಪ್ರಾಧ್ಯಾಪಕಿ ಶೋಭಾ ಶಾಸ್ತ್ರಿ ಉಪಸ್ಥಿತರಿದ್ದರು. ಶ್ವೇತಾ ಸ್ವಾಗತಿಸಿ, ಸುನೀತ್ ವಂದಿಸಿದರು. ಫರಾನಾ ಎಸ್ ಎನ್ ಕಾರ್ಯಕ್ರಮ ನಿರೂಪಿಸಿದರು.