ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಎಮ್‍ಎಸ್‍ಡಬ್ಲ್ಯೂ ವಿಭಾಗದ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸಮಾಜ ಕಾರ್ಯದ ಕುರಿತು ಅರಿವು ಮೂಡಿಸುವ ಸಲುವಾಗಿ ಆಗಸ್ಟ್ 28 ರಂದು ವಿವಿಧ ಸೇವಾ ಸಂಸ್ಥೆಗಳಿಗೆ ಭೇಟಿ ನೀಡಿ, ಅಧ್ಯಯನ ಕಾರ್ಯಕ್ರಮವನ್ನು ಸಂಯೋಜಿಸಲಾಯಿತು.
ವಿದ್ಯಾರ್ಥಿಗಳು ಮಂಗಳೂರಿನ ಅವೆ ಮರಿಯ ಕ್ಯಾನ್ಸರ್ ರೋಗಿಗಳ ಆರೈಕಾ ಕೇಂದ್ರ, ವಾಮಂಜೂರಿನ ಧರ್ಮಜ್ಯೋತಿ ಸಮೂಹ ಸೇವಾ ಕೇಂದ್ರ, ಗುರುಪುರದ ಎಚ್‍ಎನ್ ಬಾಧಿತ ಮಕ್ಕಳ ಪುನಶ್ಚೇತನ ಸಂಸ್ಥೆ, ಸ್ನೇಹ ಸದನ ಮೊದಲಾದೆಡೆ ಭೇಟಿ ನೀಡಿ, ಅವುಗಳ ಕಾರ್ಯ ವೈಖರಿ, ಸಮಾಜ ಸೇವಾ ಕಾರ್ಯಕ್ರಮಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.
ಕಾಲೇಜಿನ ಎಮ್‍ಎಸ್‍ಡ್ಲ್ಯೂ ವಿಭಾಗದ ಸಯೋಜಕಿ ಶ್ರೀಮಣಿ, ಸಹಾಯಕ ಪ್ರಾಧ್ಯಾಪಕರಾದ ಶೀತಲ್ ಕುಮರ್ ಕೆ ವಿ ಮತ್ತು ದೀಪಿಕಾ ಎಮ್ ಈ ಅಧ್ಯಯನ ಕಾರ್ಯಕ್ರಮವನ್ನು ಸಂಯೋಜಿಸಿದರು.