Tuesday, January 21, 2025
ಸುದ್ದಿ

ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ – ಕಹಳೆ ನ್ಯೂಸ್

ಪುತ್ತೂರು: ರಾಷ್ಟ್ರದ ಸಂಪತ್ತು ಎಂದರೆ ಯುವಕರು. ಈ ಯುವ ಸಂಪತ್ತು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಅವರಿಗೆ ಸರಿಯಾಗಿ ದಾರಿ ತೋರಿಸುವ ಕೆಲಸವಾಗಬೇಕಿದೆ. ಏಕೆಂದರೆ ಯುವಕರು ವೃತ್ತಿಯ ಮೂಲಕ ಹಣ ಸಂಪಾದಿಸುವ ಹಿಂದೆ ಬಿದ್ದಿದ್ದಾರೆ. ಅದರ ಬದಲು ಜೀವನ ಮೌಲ್ಯಗಳನ್ನು ಅಳವಡಿಸುವ ಮುಖೇನ ಒಗ್ಗಟ್ಟಿನಿಂದ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ನೆಹರೂನಗರದ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ವಿವೇಕಾನಂದ ಪದವಿ, ವಿವೇಕಾನಂದ ಕಾನೂನು ಕಾಲೇಜು, ವಿವೇಕಾನಂದ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಆಶ್ರಯದಲ್ಲಿ ಕರ್ನಾಟಕ ಫೋರಂ ಫಾರ್ ಇಂಟಗ್ರೆಟೆಡ್ ನ್ಯಾಶನಲ್ ಸೆಕ್ಯುರಿಟಿ ಸಹಯೋಗದಲ್ಲಿ ‘ಏಲಿಯನೇಶನ್ ಆಫ್ ಯೂತ್ ಆ್ಯಂಡ್ ಸೊಲ್ಯುಷನ್ಸ್’ ಎಂಬ ವಿಷಯದ ಕುರಿತ ‘ಸುಪಥ’ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರದ ಬಹುಸಂಖ್ಯೆಯ ತರುಣರು ತಮ್ಮ ಚಿಂತನೆ, ಯೋಚನೆ, ಶಕ್ತಿಯನ್ನು ಸಂಸ್ಕಾರ, ಸಂಸ್ಕøತಿ ಹಾಗೂ ಜೀವನ ಮೌಲ್ಯಗಳ ಮುಖೇನ ರಾಷ್ಟ್ರದ ಅಭಿವೃದ್ಧಿಯ ಕುರಿತು ಯೋಚಿಸುವ ಕಾರ್ಯ ಯುವಜನತೆ ಮಾಡಬೇಕು. ಮಾತ್ರವಲ್ಲದೆ ಯುವಕರು ತಮ್ಮ ಗುರಿಯನ್ನು ರಾಷ್ಟ್ರಕ್ಕೆ ಹೆಸರು ತರುವಂತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಬೆಂಗಳೂರಿನ ಹಿರಿಯ ವಕೀಲ, ಫೋರಂ ಫಾರ್ ಇಂಟಗ್ರೆಟೆಡ್ ನ್ಯಾಶನಲ್ ಸೆಕ್ಯುರಿಟಿಯ ರಾಷ್ಟ್ರೀಯ ಕಾರ್ಯದರ್ಶಿ ವಿ. ಎಸ್. ಹೆಗ್ಡೆ ಮಾತನಾಡಿ, ದೇಶ ನಿರ್ಮಾಣದಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ. ಹಾಗಾಗಿ ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ಘಟನೆಯನ್ನು ಅವಲೋಕಿಸಬೇಕು ಏಕೆಂದರೆ ಪ್ರತಿ ಕ್ಷೇತ್ರದಲ್ಲಿ ಯುವಕರು ಕೆಲಸ ನಿರ್ವಹಿಸುತ್ತಿರುವುದರಿಂದ ಈ ಬಗ್ಗೆ ಗಂಭೀರ ಚಿಂತನೆಯನ್ನು ಮಾಡಬೇಕು ಎಂದು ತಿಳಿಸಿದರು.

ಭಾರತ ಸರಕಾರದ ನಿವೃತ್ತ ಕಾರ್ಯದರ್ಶಿ ಹಾಗೂ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಕಾರ್ಯಾಧ್ಯಕ್ಷ ವಿ. ವಿ ಭಟ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣಭಟ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್, ವಿವೇಕಾನಂದ ಬಿಎಡ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ.ಎ.ವಿ.ನಾರಾಯಣ, ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ. ಜಯರಾಮ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಾದ ಜಯಂತಿ ನಾಯ್ಕ್, ಕೃಷ್ಣ ನಾಯ್ಕ್, ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್, ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿಜಯ ಕಾರಂತ ಗಣಪತಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಮೇಘನಾ ಪ್ರಾರ್ಥಿಸಿದರು. ವಿವೇಕಾನಂದ ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಅಯ್ಯರ್ ಕಾರ್ಯಕ್ರಮ ನಿರ್ವಹಿಸಿದರು.