Monday, November 25, 2024
ಸುದ್ದಿ

ಇಡೀ ದೇಶವೇ ನಿಮ್ಮ ಜೊತೆಗಿದೆ: ಇಸ್ರೋ ವಿಜ್ಞಾನಿಗಳಿಗೆ ಆತ್ಮಸ್ತೈರ್ಯ ತುಂಬಿದ ಪ್ರಧಾನಿ ಮೋದಿ – ಕಹಳೆ ನ್ಯೂಸ್

ಬೆಂಗಳೂರು: ನಿಮ್ಮ ಪ್ರಯತ್ನವನ್ನು ಇಡೀ ಭಾರತವೇ ಕೊಂಡಾಡುತ್ತಿದೆ. ಅಡೆ ತಡೆಗಳಿಂದ ನಮ್ಮ ಉತ್ಸಾಹವೇನು ಕಡಿಮೆಯಾಗಲಿಲ್ಲಾ, ಬದಲಾಗಿ ಹೆಚ್ಚಾಗಿದೆ. ದೇಶದ ಪ್ರಗತಿಗೆ ಅತೀ ದೊಡ್ಡ ಕೊಡುಗೆ ನೀಡಿದ್ದೀರಾ ಎಂದು ಪ್ರಧಾನಿ ಮೋದಿ ಇಸ್ರೋ ವಿಜ್ಞಾನಿಗಳಿಗೆ ಆತ್ಮಸ್ತೈರ್ಯ ತುಂಬಿದ್ದಾರೆ.

ರಾಷ್ಟ್ರವನ್ನು ಉದ್ದೇಶಿಸಿ ಬೆಂಗಳೂರಿನ ಇಸ್ರೋ ಕಂಟ್ರೋಲ್ ಸೆಂಟರ್‍ನಲ್ಲಿ ಮಾತನಾಡಿದ ಅವರು ನಿಮ್ಮ ಮನಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇವೆ. ನಿಮ್ಮ ಕಣ್ಣುಗಳು ಮುಖದ ಭಾವನೆಯನ್ನ ಹೇಳುತ್ತಿತ್ತು. ವಿಜ್ಞಾನಿಗಳ ಕಾರ್ಯಕ್ಷಮತೆಗೆ ಹೆಮ್ಮೆ ಪಡುತ್ತೇವೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಂದ್ರನನ್ನು ಮುಟ್ಟುವ ಆಸೆ ಇನ್ನಷ್ಟು ಗಟ್ಟಿಯಾಗಿದ್ದು, ನಿಮ್ಮ ಕಠಿಣ ಪರಿಶ್ರಮ ಪ್ರತಿಯೊಬ್ಬ ಭಾರತೀಯನಿಗೂ ತಿಳಿದಿದೆ. ಇಡೀ ಭಾರತವೇ ನಿಮ್ಮ ಜೊತೆಗಿದೆ. “ಸ್ಟೇ ಸ್ಟಡಿ ಅಂಡ್ ಲುಕ್ ಅಹೆಡ್ ” ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಹ್ಯಾಕಾಶ ರಂಗದಲ್ಲಿ ಮೈಲಿಗಲ್ಲು ಸ್ಥಾಪನೆಗೆ ಮುಂದಾಗಿದ್ದ ಇಸ್ರೋಗೆ ವಿಕ್ರಮ್ ಲ್ಯಾಂಡರ್ ನೌಕೆಯ ಸಂವಹನ ಕಡಿತದಿಂದ ಅಲ್ಪ ಹಿನ್ನಡೆಯಾಗಿತ್ತು. 48 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಶುಕ್ರವಾರ ತಡರಾತ್ರಿಯ ಸಮಯದಲ್ಲಿ 27 ಕಿಲೋ ಗ್ರಾಂ ತೂಕದ ಪ್ರಗ್ಯಾನ್ ರೋವರ್ ಅನ್ನು ತನ್ನೊಡಳಲ್ಲಿ ಇರಿಸಿಕೊಂಡಿದ್ದ 1471 ಕಿಲೋ ಗ್ರಾಂ ತೂಕದ ‘ವಿಕ್ರಂ ಲ್ಯಾಂಡರ್’ ಯಶಸ್ವಿಯಾಗಿ ಚಂದಿರನ ದಕ್ಷಿಣ ಧ್ರುವದ ಉದ್ದೇಶಿತ ಪ್ರದೇಶದಲ್ಲಿ ಇಳಿಯುವ ಹಂತದಲ್ಲಿ ಕೊನೇ ಕ್ಷಣದಲ್ಲಿ ನಿಯಂತ್ರಣ ಕೇಂದ್ರದಿಂದ ತನ್ನ ಸಂಪರ್ಕವನ್ನು ಕಡಿದುಕೊಂಡಿತ್ತು. ಇದು ಇಸ್ರೋ ವಿಜ್ಞಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಇಂದು ಸುದ್ದಿಗೋಷ್ಠಿ ನಡೆಸಿ ಆತ್ಮಸ್ತೈರ್ಯ ತುಂಬಿದ್ದಾರೆ.